ದಿ.31 ರಂದು ಸಮಾರೋಪ

(ಸಂಜೆವಾಣಿ ನ್ಯೂಸ್)
ಹುಬ್ಬಳ್ಳಿ,ಆ28: ಮಜೇಥಿಯಾ ಫೌಂಡೇಶನ್ ಹಾಗೂ ಸಂಸ್ಕೃತ ಭಾರತಿ ಸಹಭಾಗಿತ್ವದಲ್ಲಿ ವಿಶ್ವ ಸಂಸ್ಕೃತ ದಿನಾಚರಣೆ ನಿಮಿತ್ತ ಹಮ್ಮಿಕೊಳ್ಳಲಾದ ಸಂಸ್ಕೃತಾಮೃತಮ್ ಅಭಿಯಾನದ ಸಮಾರೋಪ ಸಮಾರಂಭ ಹಾಗೂ ಜ್ಞಾನದಾ ಸಂಸ್ಕೃತ ಪ್ರದರ್ಶಿನಿ ಕಾರ್ಯಕ್ರಮ ಆ.31 ರಂದು ಬೆಳಿಗ್ಗೆ 11 ರಿಂದ ರಾತ್ರಿ 8 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಕೃತಾಮೃತಮ್ ಅಭಿಯಾನದ ಸದಸ್ಯ ಸುಭಾಷಸಿಂಗ್ ಜಮಾದಾರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಉದ್ಘಾಟಿಸುವರು. ಅತಿಥಿಗಳಾಗಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕುಲಪತಿ ಪೆÇ್ರ. ಸಿ. ಬಸವರಾಜು ಪಾಲ್ಗೊಳ್ಳುವರು. ಸಂಸ್ಕೃತ ಭಾರತಿ ಮಹಾಮಂತ್ರಿ ಸತ್ಯನಾರಾಯಣ, ಮಜೇಥಿಯಾ ಫೌಂಡೇಶನ್ ಅಧ್ಯಕ್ಷೆ ನಂದಿನಿ ಮಜೇಥಿಯಾ, ಉದ್ಯಮಿ ಕಶ್ಯಪ ಮಜೇಥಿಯಾ ಉಪಸ್ಥಿತರಿರುವರು ಎಂದರು.
ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಗದಗ-ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಮಹಾರಾಜ ಸಾನ್ನಿಧ್ಯ ವಹಿಸುವರು. ಅತಿಥಿಗಳಾಗಿ ಐಐಟಿ ನಿರ್ದೇಶಕ ಪೆÇ್ರ. ವೆಂಕಪ್ಪಯ್ಯ ದೇಸಾಯಿ ಪಾಲ್ಗೊಳ್ಳುವರು. ವಕ್ತಾರರಾಗಿ ಅಖಿಲ ಭಾರತೀಯ ಸಂಘಟನ ಮಂತ್ರಿ ದಿನೇಶ ಕಾಮತ ಭಾಗವಹಿಸುವರು. ಮಜೇಥಿಯಾ ಫೌಂಡೇಶನ್ ಸಂಸ್ಥಾಪಕ ಜಿತೇಂದ್ರ ಮಜೇಥಿಯಾ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.
ಕಾರ್ಯದರ್ಶಿ ಮುಕುಂದ ಜಠಾರ, ಅಜಿತ್ ಕುಲಕರ್ಣಿ, ಅಶೋಕ ಹರಪನಹಳ್ಳಿ, ಲಕ್ಷ್ಮೀನಾರಾಯಣ, ಸುನೀಲ ಕುಕನೂರ ಇದ್ದರು.