ದಿ. 30 ರಂದು ಸಂಗೀತ ಸ್ಪರ್ಧೆ


ಹುಬ್ಬಳ್ಳಿ,ಜು.14: ನಗರದ ಆರ್.ಎನ್.ಶೆಟ್ಟಿ ರಸ್ತೆಯ ಅಕ್ಷಯ ಪಾರ್ಕ್ ನಲ್ಲಿರುವ ಎಮ್.ಟಿ.ಕರೋಕೆ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಅಗಷ್ಟ್ 15 ರ ಸ್ವಾತಂತ್ರ್ಯೋತ್ಸವದ ನಿಮಿತ್ತವಾಗಿ ಸಂಗೀತಕಾರರಿಗೆ ಹಾಗೂ ಸಂಗೀತ ಪ್ರೀಯರಿಗೆ ಸಂಗೀತ ಕಾಂಪಿಟೇಶನ್ ಸೀಸನ್-1 ಸ್ಪರ್ಧೆಯನ್ನು ಇದೇ ದಿ 30 ರಂದು ಹಮ್ಮಿಕೊಳ್ಳಲಾಗಿದೆ ಎಂದು ಎಮ್.ಟಿ.ಕರೋಕೆ ರೆಕಾರ್ಡಿಂಗದ ಸ್ಟುಡಿಯೋ ಸದಸ್ಯೆ ಪ್ರೀತಿ ದೊಡ್ಡಮನಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಇದೇ ದಿ. 28 ರವರೆಗೆ ನೋಂದಣಿಗೆ ಅವಕಾಶವಿದೆ.
ಕಳೆದ ಐದು ವರ್ಷಗಳಿಂದ ಪ್ರತಿ ವರ್ಷವೂ ಕೂಡಾ ಅಗಷ್ಟ್ 15 ರಂದು ಸವಿ ನೆನಪಿಗಾಗಿ ವಿನೂತನ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಸಿಂಗಿಂಗ್ ಕಾಂಪಿಟೇಶನ್ ಗೆ ಪ್ರವೇಶ ಫೀ ಇರಲಿದೆ.
ಈ ಸಂಗೀತ ಸ್ಪರ್ಧೆಗೆ ವಿಜೇತರಾದವರಿಗೆ ಕೆರೋಕೆ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಹಾಡಲು ಅವಕಾಶದ ಜೊತೆಗೆ ಪ್ರಥಮ ಬಹುಮಾನ 50,000, ದ್ವಿತೀಯ ಬಹುಮಾನ 25000 ಹಾಗೂ ತೃತೀಯ ಬಹುಮಾನ 15,000 ನೀಡಲಾಗುವುದು ಎಂದರು. ಇನ್ನೂ ಈ ಕಾರ್ಯಕ್ರಮಕ್ಕೆ ಚಲನಚಿತ್ರ ಹಾಸ್ಯ ನಟ ಚಿಕ್ಕಣ್ಣ ಸೇರಿದಂತೆ ಚಲನಚಿತ್ರ ನಟ, ನಟಿಯರು ಆಗಮಿಸಲಿದ್ದಾರೆಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಕಾಂತ ದೇವರಮನೆ, ಸಂತೋಷ ಪೂಜಾರ, ಚಿದಾನಂದ ಬಳ್ಳಾರಿ, ವೀಜೇಶ್, ಕರಣ್ ಉಪಸ್ಥಿತರಿದ್ದರು.