ದಿ.30 ರಂದು ಡಾ. ಶರ್ಮಾ 90ನೇ ಜನ್ಮದಿನಾಚರಣೆ


ಹುಬ್ಬಳ್ಳಿ,ಸೆ.28: ಸಾಹಿತಿ, ಶಿಕ್ಷಣ ತಜ್ಞ ಹೋರಾಟಗಾರರಾದ ಡಾ. ಕೆ.ಎಸ್.ಶರ್ಮಾ (ಕುವಲಯ ಶ್ಯಾಮ ಶರ್ಮಾ) ಇವರ 90 ನೇ ಜನ್ಮದಿನಾಚರಣೆಯನ್ನು ಸೆಪ್ಟೆಂಬರ್ 30 ರಂದು ಬೆ. 11.30 ಕ್ಕೆ ನಗರದ ಗೋಕುಲ್ ರಸ್ತೆಯ ಬಸವೇಶ್ವರನಗರದ ಡಾ. ಕೆ.ಎಸ್.ಶರ್ಮಾ ಕ್ಯಾಂಪಸ್ ನ ವಿಶ್ವಶ್ರಮ ಚೇತನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಜೀವಿನಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಚೇರ್ಮನ್ ಮೋಹನ್ ಲಿಂಬಿಕಾಯಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಕೆ.ಎಸ್.ಶರ್ಮಾ 90 ನೇ ಜನ್ಮದಿನಾಚರಣೆ ಸಮಿತಿ, ಸಂಜೀವಿನಿ ಆರ್ಯುವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಡಾ. ಕೆ.ಎಸ್.ಶರ್ಮಾ ಸಮೂಹ ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡಿದ್ದು, ಅಂದಿನ ಕಾರ್ಯಕ್ರಮದಲ್ಲಿ ಚಿಂತನ-ಮಂಥನದ ಒಂಬತ್ತು ಸಂಪುಟದ ಕೃತಿಗಳ ಬಿಡುಗಡೆ ಮಾಡಲಾಗುವುದು ಎಂದರು.
ಬಹುಮುಖ ಪ್ರತಿಭೆಯಾದ ಡಾ. ಶರ್ಮಾಜೀಯವರು ಜೀವನದುದ್ದಕ್ಕೂ ಹೋರಾಟ ಮಾಡಿದ ಅವರು, ಹಿರಿಯ ಪತ್ರಕರ್ತರಾಗಿ, ಸಾಹಿತಿಗಳಾಗಿ, ದಿನಗೂಲಿ ನೌಕರರ ವಿಮೋಚನಾ ಶಿಲ್ಪಿಯಾದ ಅವರು ವಿವಿಧ ಕ್ಷೇತ್ರದಲ್ಲಿ ತಮ್ಮ ವರ್ಚಸ್ಸು ಮೂಡಿಸಿದ್ದಾರೆ. ಮಾಜಿ ಸಿಎಂ ಹಾಗೂ ವಿ.ಪ. ಸದಸ್ಯ ಜಗದೀಶ್ ಶೆಟ್ಟರ್ ಸೇರಿದಂತೆ ಮೊದಲಾದ ಗಣ್ಯರು ಇವರ ಶಿಷ್ಯರಾಗಿದ್ದಾರೆಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲರಾದ ಡಾ. ಶಶಿಕಾಂತ ಹಿರೇಮಠ, ಪೆÇ್ರೀ. ರವೀಂದ್ರ ಶಿರೋಳ್ಕರ್, ಡಾ. ಮಹೇಶ್ ದೇಸಾಯಿ ಡಾ. ಸೋಮಶೇಖರ ಹುದ್ಧಾರ ಉಪಸ್ಥಿತರಿದ್ದರು.