ದಿ.30 ರಂದು ಜಯ ಕರ್ನಾಟಕ ಸಂಘಟನೆಯ ಗ್ರಾಮ ಘಟಕಗಳ ಉದ್ಘಾಟನೆ


ನವಲಗುಂದ,ನ.29 : ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಯ ಕರ್ನಾಟಕ ಸಂಘಟನೆಯ ತಾಲೂಕಿನ 11 ಗ್ರಾಮ ಘಟಕಗಳ ಉದ್ಘಾಟನಾ ಸಮಾರಂಭವು ದಿನಾಂಕ 30/11/23 ರಂದು ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿ ಜರಗಲಿದೆ ಎಂದು ತಾಲೂಕು ಅಧ್ಯಕ್ಷ ಉಮೇಶ್. ವೆಂ. ನವಲಗುಂದ ಹೇಳಿದರು.
ಸಂಘದ ಕಾರ್ಯಾಲಯದಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಕಾರ್ಯಕ್ರಮಕ್ಕೆ ಸಿದ್ದೇಶ್ವರಶ್ರೀಗಳು ಪಂಚಗ್ರಹ ಹಿರೇಮಠ ನವಲಗುಂದ, ಅಭಿನವ ಮೃತ್ಯುಂಜಯ ಶ್ರೀಗಳು ಮಣಕವಾಡ, ಬಸವಲಿಂಗಶ್ರೀಗಳು ಗವಿಮಠ ನವಲಗುಂದ, ವೀರೇಂದ್ರಶ್ರೀ ನಾಗಲಿಂಗ ಸ್ವಾಮಿಮಠ ನವಲಗುಂದ ಪೂಜ್ಯರ ಸಾನಿಧ್ಯವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಶಾಸಕ ಎನ್. ಎಚ್. ಕೋನರಡ್ಡಿ ಉದ್ಘಾಟಿಸಲಿದ್ದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಭುವನೇಶ್ವರಿ ದೇವಿ ಭಾವಚಿತ್ರ ಉದ್ಘಾಟನೆ, ಹಾಗೂ ಧಾರವಾಡ ಜಿಲ್ಲಾ ಯುತ್ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಜ್ಯೋತಿ ಬೆಳಗಿಸುವರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ. ಎನ್. ಗಡ್ಡಿ, ಶಿವಾನಂದ ಕರಿಗಾರ ಶ್ರೀಶೈಲ ಮುಲಿಮನಿ, ಹುಚ್ಚಪ್ಪ ಭೋವಿ, ಶ್ರೀಕಾಂತ ಮನವಚಾರ್ಯ, ಯಲ್ಲಪ್ಪ ಭೋವಿ, ಪ್ರಕಾಶ್ ಶಿಗ್ಲಿ ಸೇರಿದಂತೆ ಗಣ್ಯಮಾನ್ಯರು, ವಿವಿಧ ಸಂಘಟನೆಯ ಹೋರಾಟಗಾರರು, ತಾಲೂಕಿನ ಪತ್ರಕರ್ತರು, ಪುರಸಭೆ ಸದಸ್ಯರು, ವರ್ತಕರು, ಮಹಿಳಾ ಸಂಘಟನೆಗಳು, ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾ, ತಾಲೂಕು ಸರ್ವ ಸದಸ್ಯರು ಕಾರ್ಯಕ್ರಮಕ್ಕೆ ಆಗಮಿಸುವವರು ಎಂದರು.