ದಿ. 29 ರಂದು ಶಿಕ್ಷಕರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಸಂಡೂರು:ಡಿ:27 ಶಿಕ್ಷಕರ ಸಂಘಕ್ಕೆ ದಿ. 29 ರಂದು ಮಂಗಳವಾರ ಬೆಳಿಗ್ಗೆ 10.00 ಗಂಟೆಗೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಸಾ. 5.00 ಗಂಟೆಗೆ ಫಲಿತಾಂಶ ನೀಡಲಾಗುವುದು. ಅಧ್ಯಕ್ಷ ಸ್ಥಾನಕ್ಕಾಗಿ ಸುಮನ್ ರವರ ಬಣದಿಂದ ಡಿ.ಕೆ. ರವಿ ಹಾಗೂ ಚೌಗಳಿ ಪರಶುರಾಮಪ್ಪ ಬಣದಿಂದ ಸುನಿಲ್ ಕುಮಾರ ಸ್ಪರ್ದೆ ಬಯಸಿದ್ದಾರೆಂದು ಚುನಾವಣೆಯು ದಿ. 29 ರಂದು ನಡೆಯುವುದೆಂದು ಬಿ.ಆರ್.ಸಿ. ಕಛೇರಿಯ ಸಮನ್ವಯ ಅಧಿಕಾರಿಗಳು, ಚುನಾವಣಾ ಅಧಿಕಾರಿಗಳಾದ ಬಿ. ಉಮಾಪತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ : ಶಿಕ್ಷಕರ ಸಂಘದಲ್ಲೇ 2 ಬಣಗಳಾಗಿದ್ದು, ಎಂ.ಆರ್. ಸುಮನ್ ರವರು 7 ಸ್ಥಾನಗಳಿಂದ ಜಯಗಳಿಸಿದರೆ, ಚೌಗಳಿ ಪರಶುರಾಮಪ್ಪನವರು 6 ಸ್ಥಾನಗಳಿಂದ ಚುನಾವಣೆಯಲ್ಲಿ ವಿಜೇತರಾಗಿದ್ಧಾರೆ. ಎರೆಡು ವರೆ ವರ್ಷದ ಅವಧಿಯ ನಂತರ ನಿವೃತ್ತ ರಾಗಲಿರುವ ಎಂ.ಆರ್. ಸುಮನ್ ರವರೇ ಅಧ್ಯಕ್ಷರು ಎಂದು ಈ ಮೊದಲು ನಿರ್ದರಿಸಿದರು. ಆದರೆ, ಅಧ್ಯಕ್ಷ ಸ್ಥಾನಕ್ಕಾಗಿ ಇಸ್ಮಾಯಿಲ್ ಮತ್ತು ನೂರುಲ್ಲಾರವರು ತಮಗೆ ಅಧ್ಯಕ್ಷ ಸ್ಥಾನ ಬೇಕು. ಎನ್ನುವ ಹಠ ಹೊಂದಿರುವುದರಿಂದ ಇದನ್ನರಿತ ಚೌಗಳಿ ಪರಶುರಾಮಪ್ಪನವರು ನಮ್ಮ ಬಣದಲ್ಲಿ ಯಾರು ಗುರುತುಸಿಕೊಳ್ಳುವಿರೋ ಅವರಿಗೆ ಅಧ್ಯಕ್ಷ ಸ್ಥಾನ ಖಚಿತವೆಂದಾಗ ಚೌಗಳಿ ಪರಶುರಮಪ್ಪನವರ ಗುಂಪಿಗೆ ಸುನಿಲ್ ಕುಮಾರ್ ಶಿಕ್ಷಕರು ಸೇರ್ಪಡೆಯಾದರು. ನಂತರ ಡಿ.ಕೆ. ರವಿಯವರು ಸುಮನ್ ರವರ ಬಣದಿಂದ, ಸುನಿಲ್ ಕುಮಾರ್ ಅವರು ಚೌಗಳಿ ಪರಶುರಾಮಪ್ಪನವರ ಬಣದಿಂದ ಸ್ಪರ್ದೇಗಿಳಿದಿರುವುದು ಖಾತ್ರಿಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.