ದಿ.29 ರಂದು ಮಹಾರ್ಯಾಲಿ

ಹುಬ್ಬಳ್ಳಿ,ಜ21: ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ವತಿಯಿಂದ ಜನೆವರಿ 29 ರಂದು ಮುಂಬೈಯಲ್ಲಿ ಲಿಂಗಾಯತ ಮಹಾ ರ್ಯಾಲಿ ಕಾರ್ಯಕ್ರಮವನ್ನು ಮಹಾರಾಷ್ಟ್ರ ಮುಂಬೈದ ಆಝಾದ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ಗೌರಾವಾಧ್ಯಕ್ಷ ಶ್ರೀ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆ ಹಾಗೂ ಲಿಂಗಾಯತ ಧರ್ಮಾನುಯಾಯಿಗಳಿಗೆ ವೀರಶೈವರೂ ಒಳಗೊಂಡಂತೆ ಪಂಚಮಸಾಲಿಯ 99 ಪಂಗಡದವರಿಗೂ ಧಾರ್ಮಿಕ ಅಲ್ಪಸಂಖ್ಯಾತರ ಸೌಲಭ್ಯ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಅಂದು ಒತ್ತಾಯಿಸಲಾಗುವುದು ಎಂದರು.
ನಾಗಮೋಹನದಾಸ್ ವರದಿ ಅಂಗೀಕರಿಸಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಿ, ಲಿಂಗಾಯತರ ಎಲ್ಲ ಒಳಪಂಗಡದವರಿಗೆ ಧಾರ್ಮಿಕ ಅಲ್ಪಸಂಖ್ಯಾತರ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು.
ಕರ್ನಾಟಕ ರಾಜ್ಯದಿಂದ ಸುಮಾರು 50 ಸಾವಿರ ಜನರು ಮುಂಬೈ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆಂದರು.
ಪತ್ರಿಕಾಗೋಷ್ಠಿಯಲ್ಲಿ ಗಂಗಾಧರ ದೊಡ್ಡವಾಡ, ಮಲ್ಲೇಶಪ್ಪ ದಾಸನೂರ, ಧಾರವಾಡ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಶಿವಾನಂದ ಆಬಲೂರ, ಅಶೋಕ ಬೆಂಡಿಗೇರಿ, ಪ್ರಕಾಶ ಗರಗ ಉಪಸ್ಥಿತರಿದ್ದರು.