ದಿ. 28ರಂದು ಶ್ರೀ ವಿಶ್ವಬಂಧು ಮರುಳಸಿದ್ಧೇಶ್ವರ ಕಾರ್ತಿಕೋತ್ಸವ

ದಾವಣಗೆರೆ, ಡಿ.27-ಶ್ರೀ ವಿಶ್ವಬಂಧು ಮರುಳಸಿದ್ಧೇಶ್ವರ ಕಾರ್ತಿಕೋತ್ಸವ ಸಮಿತಿಯಿಂದ ಡಿ.೨೮  ಸಂಜೆ 6.30ಕ್ಕೆ  ಪ್ರತೀ ವರ್ಷದಂತೆ ಈ ವರ್ಷವೂ 12ನೇ ಶತಮಾನದಲ್ಲಿ ಸರ್ವಜನಾಂಗದ ಹಿತಕ್ಕಾಗಿ ತಮ್ಮ ಜೀವಮಾನವನ್ನೇ ಮುಡುಪಾಗಿಟ್ಟು ತೆಲಗುಬಾಳು ಸಿದ್ಧನಿಗೆ ಉಜ್ಜಯಿನಿಯ ಸದ್ಧರ್ಮ ಪೀಠದ ಮೇಲೆ ಕುಳ್ಳಿರಿಸಿ “ತರಳಬಾಳು” ಎಂದು ಹರಸಿ ಆಶೀರ್ವದಿಸಿದ ಎಲ್ಲರ ಆರಾಧ್ಯ ಮಹಾಪುರುಷರಾದ ಶ್ರೀ ವಿಶ್ವಬಂಧು ಮರುಳಸಿದ್ಧರ ಕಾರ್ತಿಕೋತ್ಸವವನ್ನು ಡಿ. 28 ರ ಸಂಜೆ 6.30ಕ್ಕೆ ಏರ್ಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ದಾವಣಗೆರೆ ನಗರದ ಶ್ರೀ ತರಳಬಾಳು ಬಡಾವಣೆಯ ಶ್ರೀ ಶಿವಕುಮಾರಸ್ವಾಮಿ ಮಹಾಮಂಟಪದಲ್ಲಿ ಸ್ಥಾಪನೆಗೊಂಡಿರುವ ಶ್ರೀ ಸ್ವಾಮಿಯ ಶಿಲಾಮೂರ್ತಿಗೆ ಅಭಿಷೇಕ ಹಾಗೂ ನಂದಾದೀಪವನ್ನು  ಸರ್ವಭಕ್ತರು ಬೆಳಗಿಸುವುದರ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿ, ಶ್ರೀ ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕಾಗಿ ವಿನಂತಿ.ಸಂಜೆ 6.30ಕ್ಕೆ ದಾವಣಗೆರೆ ವಿದ್ಯಾನಗರದ ಈಶ್ವರ ಪಾರ್ವತಿ ಗಣಪತಿ ದೇವಸ್ಥಾನದ ಭಜನಾ ಮಂಡಳಿಯಿಂದ ಭಕ್ತಿಪೂರ್ವಕ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ನಗರದ ತರಳಬಾಳು ಬಡಾವಣೆಯ ಶ್ರೀ ವಿಶ್ವಬಂಧು ಮರುಳಸಿದ್ಧೇಶ್ವರ ಕಾರ್ತಿಕೋತ್ಸವ ಸಮಿತಿ ತಿಳಿಸಿದೆ.