ದಿ.27 ರಂದು ಸನ್ಮಾನ ಕಾರ್ಯಕ್ರಮ


ಹುಬ್ಬಳ್ಳಿ,ಡಿ.25: ಕಲ್ಪವೃಕ್ಷ ಮಹಿಳಾ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ನೆರವು ಸಂಸ್ಥೆ ಹುಬ್ಬಳ್ಳಿ ಇವರ ಸಹಯೋಗದೊಂದಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮವನ್ನು ಡಿಸೆಂಬರ್ 27 ರಂದು ಬೆ. 10 ಗಂಟೆಗೆ ನಗರದ ಅಶೋಕನಗರದ ಪೆÇಲೀಸ್ ಸ್ಟೇಷನ್ ಬಳಿಯ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನೆರವು ಸಂಸ್ಥೆ ಹುಬ್ಬಳ್ಳಿ ಅಧ್ಯಕ್ಷರಾದ ಸಾರಾ ಗೋಕಾವಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತ್ಯ, ಕಲೆ, ಸಂಗೀತ, ನೃತ್ಯ, ರಂಗಭೂಮಿ, ಶೈಕ್ಷಣಿಕ, ಸಾಮಾಜಿಕ, ಕೃಷಿ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆಗೈದ 200 ಸಾಧಕರಿಗೆ ಸನ್ಮಾನ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗಿರಿಜಾ ಹಿರೇಮಠ, ಡಾ. ರಮೇಶ್ ಮಹಾದೇವಪ್ಪನವರ, ರತ್ನಾ ಬಸಾಪೂರ, ಪೂಜಾ ಬೊಮ್ಮನಹಳ್ಳಿ, ಸ್ನೇಹಾ ಜಾಧವ, ಕಲಂಧರ ಮುಲ್ಲಾ, ಕಲ್ಮೇಶ ಹಾವೇರಿಪೇಠ ಉಪಸ್ಥಿತರಿದ್ದರು.