ದಿ. 27 ರಂದು ವಿಚಾರಗೋಷ್ಠಿ

ಧಾರವಾಡ,ಮೇ25 : ಕೆ.ಎಲ್.ಇ ಸಂಸ್ಥೆಯ ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ವತಿಯಿಂದ ಶರಣರು ಮತ್ತು ಜಾಗತಿಕ ದಾರ್ಶನಿಕರು ಒಂದು ದಿನದ ಅಂತಾರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿ ಮೇ. 27 ರಂದು ಬೆಳಗ್ಗೆ 10 ಕ್ಕೆ ಮಹಾವಿದ್ಯಾಲಯ ಸಭಾಭವನದಲ್ಲಿ ಏರ್ಪಡಿಸಿದೆ ಎಂದು ಡಾ ವೀಣಾ ಹೂಗಾರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನ್ಯಾಕ್‍ನಿಂದ ಎ+ ಗ್ರೇಡ್ ಶ್ರೇಯಾಂಕಿತ ಐಕ್ಯೂಎಸಿ ಇನಿಷೇಯೆಟಿವ್ ಪಡೆದ ಈ ಮಹಾವಿದ್ಯಾಲಯದ ಕನ್ನಡ ವಿಭಾಗ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಅಕ್ಕನ ಅರಿವು-ವಚನ ಅಧ್ಯಯನ ವೇದಿಕೆ ಪುಣೆ, ಮಹಾರಾಷ್ಟ್ರ ಇವರ ಪರಸ್ಪರ ಒಡಂಬಡಿಕೆಯ ಸಹಯೋಗದಲ್ಲಿ ಮಹಾವಿದ್ಯಾಲಯದ ಸಭಾಭವನದಲ್ಲಿ ಗೋಷ್ಠಿಗಳು ಜರುಗಲಿವೆ ಎಂದರು.

ನ್ಯೂಜಿಲ್ಯಾಂಡ್ ಏಷಿಯಾ ಫೆಸಿಫಿಕ್ ಬಸವ ಸಮಿತಿ ಚೇರಮನ್ ಡಾ. ಲಿಂಗಣ್ಣಾ ಕಲಬುರ್ಗಿ ಆಶಯ ನುಡಿಗಳನ್ನಾಡುವರು. ಬಸವ ಸಮಿತಿ ಸಿಡ್ನಿ ಆಸ್ಟ್ರೇಲಿಯಾದ ಅಧ್ಯಕ್ಷ ಸಂಗಮೇಶ ಸಾಲಿಮಠ ಶುಭ ಸಂದೇಶ ಸಾರುವರು. ಸಂಶೋಧಕ ಡಾ.ವೀರಣ್ಣಾ ರಾಜೂರ ಅನುಭಾವ ನಿವೇದನೆ ಮಾಡುವುದರ ಜೊತೆಗೆ ಗ್ರಂಥ ಬಿಡುಗಡೆಗೊಳಿಸುವರು. ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಅಧ್ಯಕ್ಷ ಡಾ. ಶಶೀಕಾಂತ ಪಟ್ಟಣ ವಿಚಾರ ಮಂಡನೆ ಮಾಡಲಿದ್ದಾರೆ. ಕೆ.ಎಲ್.ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ.ವಿ.ಆಯ್.ಪಾಟೀಲ ಅಧ್ಯಕ್ಷತೆವಹಿಸುವರು. ಅಕ್ಷರ ಪೌಂಡೇಶನ್ ವಿಭಾಗೀಯ ಸಂಯೋಜಕಿ ಶ್ರೀಮತಿ ಎಂಜಲೀನಾ ಗ್ರೆಗರಿ ವಚನ ಸಂಗೀತ ನೆರವೇರಿಸುವರು.

ಡಾ. ವೀಣಾ ಹೂಗಾರ, ಡಾ.ನೀಲಕ್ಕಾ ಪಾಟೀಲ, ಪೆÇ್ರ.ಬಿ.ಎ.ಬೆಣ್ಣಿ, ಡಾ.ರೆಹಮಾನ ಗೊರಜನಾಳ, ಪೆÇ್ರ. ಶ್ರೀದೇವಿ.ಎಸ್.ಸಂಗೊಳ್ಳಿ ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕರಣ ದೊಡವಾಡ ಡಾ. ನೀಲಕ್ಕ ಪಾಟೀಲ. ಸಿ.ಎಸ್ ಪಾಟೀಲ ಇದ್ದರು