ದಿ. 27ರಂದು ಪದಗ್ರಹಣ ಸಮಾರಂಭ

ಹುಬ್ಬಳ್ಳಿ,ಜು25 : ಪ್ರೊಬಸ್ ಕ್ಲಬಿನ 5ನೇ ವಾರ್ಷಿಕೋತ್ಸವ ಹಾಗೂ 2022-23ರ ಪದಗ್ರಹಣ ಸಮಾರಂಭವು ಇದೇ ದಿ. 27 ರಂದು ಬುಧವಾರ ಮುಂಜಾನೆ 10-30ಕ್ಕೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಚವ್ಹಾಣ ಗ್ರೀನ್ ಗಾರ್ಡನ್‍ನಲ್ಲಿ ಜರುಗಲಿದೆ.
ಈ ಸಮಾರಂಭ ಅಧ್ಯಕ್ಷತೆಯನ್ನು ಪ್ರೋ. ವ್ಹಿ. ಬಿ. ಮಾಗನೂರ, ನಿವೃತ್ತ ಉಪಕುಲಪತಿಗಳು ವಹಿಸುವರು. ಪದಗ್ರಹಣ ಅತಿಥಿಗಳಾಗಿ ಗಿರೀಶ ಪಾಟೀಲ, ಅಧ್ಯಕ್ಷರು, ರೋಟರಿ ಕ್ಲಬ್ (ಉ), ಹುಬ್ಬಳ್ಳಿ ಇವರು ವಹಿಸುವರು. ನಿಯೋಜಿತ ಅಧ್ಯಕ್ಷರು ಅಪ್ಪಾಸಾಹೇಬ ಚವ್ಹಾಣ ಮಾಲಕರು, ಚವ್ಹಾಣ ಗಾರ್ಡನ, ನಿಯೋಜಿತ ಕಾರ್ಯದರ್ಶಿ ಎಂ. ಪಿ. ಕುಂಬಾರ ನಿವೃತ್ತ ಉಪನ್ಯಾಸಕರು ಇವರು ವಹಿಸಿಕೊಳ್ಳುವರು.
2022-23ರ ಪದಾಧಿಕಾರಿಗಳಾಗಿ ಅಧ್ಯಕ್ಷರು : ಅಪ್ಪಸಾಹೇಬ ಚವ್ಹಾಣ, ಉಪಾಧ್ಯಕ್ಷರು : ಎಸ್. ಬಿ. ಹೊಂಬಳ, ಕಾರ್ಯದರ್ಶಿ ಎಂ. ಪಿ. ಕುಂಬಾರ, ಸಹ ಕಾರ್ಯದರ್ಶಿ : ಅಶೋಕ ತಾಳಿಕೋಟಿ, ಖಜಾಂಚಿ : ಎಂ. ನಲ್ಲಯ್ಯ ಅವರು ಆಯ್ಕೆಯಾಗಿದ್ದಾರೆ.
ಈ ಸಮಾರಂಭದಲ್ಲಿ ಸಂಸ್ಥಾಪಕ ಸದಸ್ಯರಾದ ಪ್ರೋ. ಎಸ್. ವ್ಹಿ. ಪಟ್ಟಣಶೆಟ್ಟ, ಎಂ. ಎ. ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿರುವರು.