ದಿ. 26, 27 ರಂದು ನೃತ್ಯ ಸಂಭ್ರಮ

(ಸಂಜೆವಾಣಿ ವಾರ್ತೆ)
ಹುಬ್ಬಳ್ಳಿ,ಆ23; ಶಿವಶಕ್ತಿ ಕಲಾ ಕೇಂದ್ರ ಹಾಗೂ ಪ್ರೇರಣಾ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಅಗಷ್ಟ್ 26 ಹಾಗೂ 27 ರಂದು ‘ನೃತ್ಯ ಸಂಭ್ರಮ’ ಕಾರ್ಯಕ್ರಮವನ್ನು ನಗರದ ದೇಶಪಾಂಡೆನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರೇರಣಾ ಸ್ಕೂಲ್ ಆಫ್ ಡ್ಯಾನ್ಸ್ ನ ನಿರ್ದೇಶಕರಾದ ಆನಂದ ಕುಲಕರ್ಣಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ನೃತ್ಯ ಸಂಭ್ರಮ ಕಾರ್ಯಕ್ರಮವನ್ನು 2 ದಿನಗಳವರೆಗೆ ಹಮ್ಮಿಕೊಂಡಿದ್ದು, ಅಂದು ಸಾಯಂಕಾಲ 5.30 ಕ್ಕೆ ಭರತ ನಾಟ್ಯ, ಓಡಿಸಿ, ಜನಪದ ಕಲಾತ್ಮಕ, ಕುಚುಪುಡಿ, ವಿವಿಧ ರಾಜ್ಯಗಳ ಹಬ್ಬದ ನೃತ್ಯ ಕಾರ್ಯಕ್ರಮದ ಪ್ರದರ್ಶನ ಇರಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೇರಣಾ ಶಿಂಧೆ, ಊರ್ಮಿಳಾ ಪಾತ್ರಾ, ವೀಣಾ ಗಳಗಿ, ಬಾಸುದೇವ ಸೇರಿದಂತೆ ಉಪಸ್ಥಿತರಿದ್ದರು.