
ಹುಬ್ಬಳ್ಳಿ,ಮೇ24: 75 ನೇ ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ಹಾರ್ಟ್ ಫುಲ್ ನೆಸ್ ಸಂಸ್ಥೆ ಶ್ರೀರಾಮಚಂದ್ರ ಮಿಷನ್ ಹಾಗೂ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ವತಿಯಿಂದ ಮೂರು ದಿನಗಳ ‘ಉಚಿತ ಯೋಗ ಮಹೋತ್ಸವ’ವನ್ನು ‘ಹರ್ ದಿಲ್ ಧ್ಯಾನ್, ಹರ್ ದಿನ್ ಧ್ಯಾನ್’ ಎಂಬ ಅಭಿಯಾನದಡಿಯಲ್ಲಿ ಮೇ 26 ರಿಂದ 28 ರವರೆಗೆ ನಗರದ ದೇಶಪಾಂಡೆನಗರದ ಗುಜರಾತ್ ಭವನದ ಎದುರಿನ ಕರ್ನಾಟಕ ಜಿಮಖಾನಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪತಂಜಲಿ ಸಂಸ್ಥೆಯ ಭವರಲಾಲ್ ಆರ್ಯ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪತಂಜಲಿ ಸಂಸ್ಥೆ, ಹುಬ್ಬಳ್ಳಿಯ ಕರ್ನಾಟಕ ಜಿಮಖಾನಾ ಅಸೋಸಿಯೇಷನ್, ವಿಜಯವಾಣಿ ಪತ್ರಿಕೆ ಹಾಗೂ ದಿಗ್ವಿಜಯ ಸುದ್ದಿ ವಾಹಿನಿಗಳ ಸಹಯೋಗದಲ್ಲಿ ಯೋಗ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರತಿ ದಿನ ಸಂಜೆ 5.30 ರಿಂದ 7.30 ರವರೆಗೆ ಏರ್ಪಡಿಸಲಾಗಿದ್ದು, ಪ್ರವೇಶ ಉಚಿತವಿದೆ ಎಂದವರು ಶಿಬಿರದಲ್ಲಿ ಯೋಗದ ವಿವಿಧ ಆಸನಗಳ, ಪ್ರಾಣಾಯಾಮ, ಮುದ್ರೆ ಮತ್ತು ಧ್ಯಾನಗಳ ಬಗ್ಗೆ ತಜ್ಞರು ಹೇಳಿಕೊಡಲಿದ್ದಾರೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಡಾ. ಬಿ.ಆರ್.ಬಾರಕೋಲ್ 9880082625 ಗೆ ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಾರ್ಟ್ ಫುಲ್ ನೆಸ್ ಧ್ಯಾನ ಕೇಂದ್ರದ ವಲಯ ಸಂಚಾಲಕರಾದ ಅಜಿತ್ ಕಾಮತ್ ಸೇರಿದಂತೆ ಉಪಸ್ಥಿತರಿದ್ದರು.