ದಿ.26 ರಂದು ಶ್ರೀರೇಣುಕಾಚಾರ್ಯರ ಜಯಂತೋತ್ಸವ


ಬ್ಯಾಡಗಿ,ಮಾ.23: ಪಟ್ಟಣದ ಶ್ರೀಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿರುವ ಶ್ರೀರೇಣುಕಾಚಾರ್ಯರ ಮಂದಿರದಲ್ಲಿ ಇದೇ ದಿ.26ರಂದು ಶ್ರೀಜಗದ್ಗುರು ರೇಣುಕಾಚಾರ್ಯ ಅವರ ಜಯಂತೋತ್ಸವ ಕಾರ್ಯಕ್ರಮವು ಜರುಗಲಿದೆ.
ಅಂದು ಶ್ರೀರೇಣುಕಾಚಾರ್ಯರ ಜಯಂತಿಯ ಅಂಗವಾಗಿ ಬೆಳಿಗ್ಗೆ 7.30 ರಿಂದ ಶ್ರೀರೇಣುಕಾಚಾರ್ಯರ ಮೂರ್ತಿಗೆ ರುದ್ರಾಭಿಷೇಕ, ಅಷ್ಟೋತ್ತರ ನಾಮವಳಿ, ಶತಬಿಲ್ವಾರ್ಚನೆ ನಡೆಯಲಿದೆ. ನಂತರ ಧರ್ಮಸಭೆ ಹಾಗೂ ಪ್ರಸಾದ ವಿತರಣೆ ಜರುಗುವುದು.
ಅಂದಿನ ಕಾರ್ಯಕ್ರಮಕ್ಕೆ ಸಕಲ ಸದ್ಭಕ್ತರು ಪಾಲ್ಗೊಳ್ಳಬೇಕೆಂದು ಶ್ರೀಜಗದ್ಗುರು ಪಂಚಾಚಾರ್ಯ ಯುವ ವೇದಿಕೆಯು ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.