ದಿ.25 ರಂದು ಹರಿವರಾಸನಂ ಶತಮಾನೋತ್ಸವ ಸಂಭ್ರಮ

ಹುಬ್ಬಳ್ಳಿ,ಡಿ23: ಶ್ರೀ ಅಯ್ಯಪ್ಪ ಭಕ್ತ ವೃಂಧ ಟ್ರಸ್ಟ್ ವತಿಯಿಂದ ಡಿ.25 ರಂದು ಸಂಜೆ 4 ಕ್ಕೆ ಹರಿವರಾಸನಂ ಶತಮಾನೋತ್ಸವ ಸಂಭ್ರಮ ಸಮಾರಂಭವನ್ನು ಇಲ್ಲಿನ ಶಿರೂರ ಪಾರ್ಕ್ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‍ನ ಉಪಾಧ್ಯಕ್ಷ ಡಾ.ಸಿ.ಎಚ್.ವಿ.ಎಸ್.ವಿ.ಪ್ರಸಾದ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಕ್ಕೆ ಲಕ್ಷಾರ್ಚನೆ, ಮಧ್ಯಾಹ್ನ 1 ಕ್ಕೆ ಅನ್ನದಾನ, ಸಂಜೆ 7 ಕ್ಕೆ ಪಡಿಪೂಜೆ ನೇರವೇರಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆನಂದ ಗುರುಸ್ವಾಮಿ, ಸಂಜೀವ ಸುಗತೆ, ಕಾಶಿನಾಥ ಹೊಸಪೇಟ, ಮಲ್ಲಿಕಾರ್ಜುನ ಅನಂತಪೂರ, ವೆಂಕಟೇಶ ಹೊಸಮನಿ ಇನ್ನಿತರರು ಇದ್ದರು.