ದಿ.25 ರಂದು ಕೃತಿಗಳ ಬಿಡುಗಡೆ

ಧಾರವಾಡ,ಸೆ.23: ಕನ್ನಡ ಪುಸ್ತಕಗಳು ಜನರ ಬಳಿ ಹೋಗಬೇಕು ಎಂಬ ಸಂಕಲ್ಪದೊಂದಿಗೆ ಸೆಪ್ಟೆಂಬರ್ 25 ರಂದು ನಾಲ್ಕು ಕೃತಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಶಂಕರ ಹಲಗತ್ತಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಉದ್ಘಾಟನೆಯನ್ನು ಡಾ. ಬಾಳಣ್ಣ ಶೀಗೇಹಳ್ಳಿ, ಕೃತಿಗಳ ಲೋಕಾರ್ಪಣೆಯನ್ನು ಪೆÇ್ರ. ಮಾಲತಿ ಪಟ್ಟಣಶೆಟ್ಟಿ, ಅಧ್ಯಕ್ಷತೆಯನ್ನು ಮಂಡ್ಯ ರಮೇಶ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೃತಿಕಾರರಾದ ಸಂತೋಷಕುಮಾರ ಮೆಹೆಂದಳೆ, ಡಾ. ಗವಿಸ್ವಾಮಿ, ಡಾ. ಡಿ.ಎಸ್ ಶ್ರೀನಿವಾಸ ಪ್ರಸಾದ್, ಖ್ಯಾತ ಅಂಕಣಕಾರ ಅನಂತ ಹುದೆಂಗಜೆ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.