ದಿ.24 ರಂದು ಅಭಿನಂದನಾ ಸಮಾರಂಭ

ಗೋಕಾಕ, ಏ 15 : ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ ಯಶಸ್ವಿಯಾಗಿ ಸಮಾಜಕ್ಕೆ 2 ಡಿ ಮೀಸಲಾತಿ ದೊರೆತ ಹಿನ್ನೆಲೆಯಲ್ಲಿ ದಿನಾಂಕ 24ರಂದು ಮೂಡಲಗಿ ಮತ್ತು ಗೋಕಾಕ ನಲ್ಲಿ ಗುರುವಂದನೆ ಹಾಗೂ ಗುರು ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.
ಗುರುವಾರದಂದು ನಗರದ ಹೊರವಲಯದಲ್ಲಿ ಬಸವೇಶ್ವರ ಸಭಾಂಗಣದಲ್ಲಿ ಗೋಕಾಕ ಹಾಗೂ ಮೂಡಲಗಿ ಪಂಚಮಸಾಲಿ ಸಮಾಜ ಬಾಂಧವರು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದ ಪೂರ್ವಭಾವಿ ಸಭೆಯ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು.
ದಿನಾಂಕ 24 ರಂದು ಮುಂಜಾನೆ ಮೂಡಲಗಿ ಪಟ್ಟಣದಲ್ಲಿ ಮೆರವಣಿಗೆ ಮತ್ತು ಸಾಯಂಕಾಲ 4 ಘಂಟೆಗೆ ಗೋಕಾಕ ನಗರದ ಬಸವೇಶ್ವರ ಸಭಾಂಗಣದಲ್ಲಿ ಗುರುವಂದನಾ ಹಾಗೂ ಗುರು ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭವನ್ನು ಯಶಸ್ವಿಗೊಳಿಸುವಂತೆ ಹೇಳಿದರು.
ನಮ್ಮ ಹೋರಾಟ ಮಕ್ಕಳ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಯಾವುದೇ ಪಕ್ಷ, ಸರಕಾರ ಮತ್ತು ವ್ಯಕ್ತಿ ವಿರುದ್ಧವಲ್ಲ ಅನ್ನ ಕೊಟ್ಟ ಪಂಚಮಸಾಲಿಗಳಿಗೆ ನ್ಯಾಯ ಸಿಗುಲು ಮಾಡಿದ ಹೋರಾಟವಾಗಿದ್ದು, ಸರಕಾರ ಆದೇಶ ನೀಡಿದ ನಂತರ ರಾಜ್ಯದ್ಯಂತ ಸಂಚರಿಸಿ ಸಮುದಾಯ ಭಾಂಧವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೋಮಶೇಖರ್ ಮಗದುಮ್ಮ, ಜಯಾನಂದ ಹುಣ್ಣಚ್ಯಾಳಿ, ನಿಂಗಪ್ಪ ಪೀರೋಜಿ, ಬಸವರಾಜ ಹುಳ್ಳೇರ, ಎಸ್.ಎಸ್. ಅಂಗಡಿ, ಬಿ.ಬಿ.ಬೆಳಕೂಡ, ಡಾ.ರಮೇಶ ಪಟಗುಂಡಿ, ಬಸವರಾಜ ಪಾಟೀಲ, ಆರ್.ಕೆ ಪಾಟೀಲ್, ರಮೇಶ ಕೌಜಲಗಿ, ಸಿ.ಬಿ.ಗಿಡ್ಡನ್ನವರ, ಪ್ರಕಾಶ ಬಾಗೋಜಿ ಸೇರಿದಂತೆ ಅನೇಕರು ಇದ್ದರು.