ದಿ.23 ರಂದು ಸಾಧಕರಿಗೆ ಸನ್ಮಾನ

ಕುಂದಗೋಳ,ಜು20 : ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಹಾಗೂ ಕುಂದಗೋಳ ತಾಲೂಕ ಘಟಕದ ವತಿಯಿಂದ ಜುಲೈ 23 ರಂದು ಬೆಳಗ್ಗೆ 10 ಕ್ಕೆ ಸಂಶಿ ಗ್ರಾಮದ ಶ್ರೀ ಜಗದ್ಗುರು ಪಕೀರೇಶ್ವರ ಕಲ್ಯಾಣಮಂಟಪದಲ್ಲಿ ಸಾಧಕರ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದೆ ಸಂಘದ ಸಮಾಜದ ಮುಖಂಡ ಎ. ಬಿ. ಉಪ್ಪಿನ ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಶ್ರೀ ತೋಟದಾರ್ಯ ಸಂಸ್ಥಾನ ಮಠದ ಪೂಜ್ಯ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿಗಳು ಹಾಗೂ ಸಂಶಿಯ ಪರಮ ಪೂಜ್ಯ ಶ್ರೀ ಚನ್ನಬಸವ ದೇವರು ಸಾನ್ನಿಧ್ಯ ವಹಿಸುವರು. ಸಂಘದ ಅಧ್ಯಕ್ಷ ಪಕ್ಕೀರೇಶ ಕೋರಿ ಅಧ್ಯಕ್ಷ ತೆ ವಹಿಸುವರು. ವಿಶೇಷವಾಗಿ ಶತಾಯುಷಿ ಚನ್ನವಿರಪ್ಪ ಅಂಗಡಿ ಕಾರ್ಯಕ್ರಮ ಉದ್ಘಾಟಿಸುವರು.
ಇದೇ ಸಂದರ್ಭದಲ್ಲಿ ಬೆಳಗಾವಿ ಕೆ.ಎಸ್.ಆರ್ ಟಿ ಸಿ ವಿಭಾಗೀಯ ಅಧಿಕಾರಿ ಸೋಮಣ್ಣ ಅಂಗಡಿ ನಿವೃತ್ತ ಶಿಕ್ಷಕ ಪಕ್ಕಿರಪ್ಪ ಬಿಂಕದಕಟ್ಟಿ ಬು.ಕೊಪ್ಪ ಗ್ರಾಮದ ಗದಿಗೆಪ್ಪ ಹಸಬಿ ಹಾಗೂ ನವಲಗುಂದ ಮುಖ್ಯಾಧಿಕಾರಿ ವೀರೇಶ ಹಸಬಿ ಅವರನ್ನು ಸನ್ಮಾನಿಸಲಾಗುವುದು.
ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ 85% ಪ್ರತಿಷಿತ ಮೇಲೆ ಪಡೆದ ವಿದ್ಯಾರ್ಥಿಗಳು ಸೇರಿ ಒಟ್ಟು 30 ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು ಸ್ಕೂಲ್ ಬ್ಯಾಗ್ 10 ನೋಟ್ ಬುಕ್ ವಿತರಣೆ ಮಾಡಲಾಗುವುದು, ವಿದ್ಯಾ.ಭ್ಯಾಸಕ್ಕೆ ಆರ್ಥಿಕ ಸಹಾಯ ಮಾಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕಾಧ್ಯಕ್ಷ ಎಫ್.ಎಂ. ಕೋರಿ, ಈಶ್ವರಪ್ಪ ನವಲಗುಂದ, ಬಸವಣ್ಣೆಪ್ಪ ಅಕ್ಕಿ, ಈರಣ್ಣ ಅಂಗಡಿ, ವಿಜಯ ಕುಂಬಿ, ಗುರುಪಾದ ಉಪಾಸಿ, ಮಡಿವಾಳಪ್ಪ ಹಸಬಿ, ಸಚಿನ ಬಂಡಿವಾಡ ಮತ್ತಿತರರು ಇದ್ದರು.