ದಿ.23 ರಂದು ನಂದಾದೀಪಾರಾಧನಾ ಮಹೋತ್ಸವ


ಲಕ್ಷ್ಮೇಶ್ವರ,ಅ.22: ಪಟ್ಟಣದ ಲಿಂಬಯ್ಯಸ್ವಾಮಿ ಮಠದಲ್ಲಿ ನಾಳೆ ದಿನಾಂಕ 23 ರಂದು ಸೋಮವಾರ ಸಾಯಂಕಾಲ 7:ಕ್ಕೆ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ವತಿಯಿಂದ ಸಾಂಪ್ರದಾಯಿಕವಾಗಿ ನಡೆದು ಬಂದ ನಂದಾದೀಪರಾದನಾ ಮಹೋತ್ಸವದ ಅಂಗವಾಗಿ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷರಾದ ಶಿವಪ್ರಕಾಶ ಲಿಂಬಯ್ಯ ಸ್ವಾಮಿ ಮಠ ಅವರು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ ಶ್ರೀಮಠವು ಆದಿ ಅನಾದಿ ಕಾಲದಿಂದಲೂ ಧಾರ್ಮಿಕ ಸಂಪ್ರದಾಯವನ್ನು ನಡೆಸಿಕೊಂಡು ಬಂದಿದ್ದು ಅದಕ್ಕೆ ದಿವಂಗತ ಲಿಂಬಯ್ಯ ಸ್ವಾಮಿ ಮತ್ತು ಶರಣಯ್ಯ ಸ್ವಾಮಿಯವರು ಸಾಂಸ್ಕೃತಿಕ ರೂಪವನ್ನು ನೀಡಿದರು. ಕಳೆದ ಅನೇಕ ವರ್ಷಗಳಿಂದ ದೀಪಾರಾಧನ ಮಹೋತ್ಸವದ ಸಂದರ್ಭದಲ್ಲಿ ಸಮಾಜದಲ್ಲಿ ವಿವಿಧ ಸ್ಥರಗಳಲ್ಲಿ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಚೇತನಗಳನ್ನು ಗುರುತಿಸಿ ಅವರಿಗೆ ಕಾಯಕಜೀವಿ ಸಂಘ ಜೀವಿ ಮತ್ತು ಶ್ರಮಜೀವಿ ಎಂಬ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ ಎಂದರು.ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಗೌರಮ್ಮ ಯಳಮಲಿ ಅವರಿಗೆ ಕಾಯಕಜೀವಿ ಗುಡಿಗೇರಿಯ ವಿಜಯಕುಮಾರ್ ಹಾಲಿಯವರಿಗೆ ಸಂಘ ಜೀವಿ ಮತ್ತು ಕರಿಯಪ್ಪ ಶಿರಹಟ್ಟಿಯವರಿಗೆ ಶ್ರಮಜೀವಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ ಎಂದರು.ಕಾರ್ಯಕ್ರಮದ ಸಾನಿಧ್ಯವನ್ನು ಹೂವಿನ ಶಿಗ್ಲಿ ವಿರಕ್ತ ಮಠದ ಚನ್ನವೀರ ಮಹಾಸ್ವಾಮಿಗಳು ವಹಿಸಲಿದ್ದು ಅಧ್ಯಕ್ಷತೆಯನ್ನು ಮಾಜಿ ಶಾಸಕ ಜಿಎಸ್ ಗಡ್ಡದೇವರ ಮಠ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುರಸಭೆ ಕಲಾಮಹಾ ವಿದ್ಯಾಲಯದ ಪ್ರಾಚಾರ್ಯರಾದ ಭೀಮಸೇನ ಉಗ್ರದವರು ಆಗಮಸಲಿದ್ದಾರೆ ಎಂದು ತಿಳಿಸಿದರು ಈರಣ್ಣ ಅಂಕಲಕೋಟಿ ಮಾತನಾಡಿದರು.ಪತ್ರಿಕಾಗೋಷ್ಠಿಯಲ್ಲಿ ಬಸಣ್ಣ ಗಾಂಜಿ ಕೃಷ್ಣ ಕುಲಕರ್ಣಿ ಶಾಂತರಾಜ್ ಓದುನವರ ಸಾಹೇಬ್ ಜಾನ್ ಸಾಬ್ ಹವಾಲ್ದಾರ ಬನ್ನಿ ವಿಜಿ ಪಡಿಗೇರಿ ಗಂಗಪ್ಪ ದುರ್ಗಣ್ಣವರ ನಿರಂಜನ ಲಿಂಬಯ್ಯ ಸ್ವಾಮಿ ಮಠ ಮ