ದಿ.22 ರಿಂದ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ

ನವಲಗುಂದ,ಜ21 : ಪಟ್ಟಣದ ಬಸ್ತಿ ಪ್ಲಾಟಿನ ಶ್ರೀ ಸಿದ್ದಿವಿನಾಯಕ ನಗರ ಹಾಗೂ ಲಕ್ಷ್ಮೀ ಪಾರ್ಕನಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಸಿದ್ದಿವಿನಾಯಕ ಹಾಗೂ ಶ್ರೀ ಆಂಜನೇಯ ದೇವಸ್ಥಾನದ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವು ಜ-22 ರಿಂದ ಜ-26 ರವರೆಗೆ ಜರುಗಲಿದೆ.
ಜ-22 ರಂದು ರವಿವಾರ ಶ್ರೀ ಸಿದ್ದಿವಿನಾಯಕ ಮತ್ತು ಶ್ರೀ ಆಂಜನೇಯ ಮೂರ್ತಿಯನ್ನು ಶ್ರೀ ಲಾಲಗುಡಿ ಹನಮಾನ್ ದೇವಸ್ಥಾನದಿಂದ ಕುಂಭ ಮೇಳ, ಸಕಲ ಕಲಾತಂಡಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣೆಗೆ ಮುಖಾಂತರ ದೇವಸ್ಥಾನಕ್ಕೆ ಸ್ವಾಗತಿಸುವುದು.
ಜ-23 ರಂದು ಸೋಮವಾರ ಶ್ರೀ ಸಿದ್ದಿವಿನಾಯಕ ಮತ್ತು ಶ್ರೀ ಆಂಜನೇಯ ಮೂರ್ತಿಗಳ ಜಲವಾಸ, ದಾನ್ಯವಾಸ, ಅರಳಿವಾಸ ಕಾರ್ಯವನ್ನು ನೆರವೇರಿಸುವುದು.
ಜ-24 ರಂದು ಮಂಗಳವಾರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಪೂಜಾ ಕಾರ್ಯವನ್ನು ಸಂಸ್ಥಾನ ಪಂಚಗ್ರಹ ಹಿರೇಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಹಾಗೂ ಶಿಷ್ಯ ಬಳಗದ ವತಿಯಿಂದ ಜರುಗಲಿದೆ ನಂತರ ಕಳಸಾರೋಹಣ ಮ-12 ಗಂಟೆಗೆ ಮಹಾಪ್ರಸಾದ ನೆರವೇರುವುದು. ಸಂಜೆ 5.30 ಕ್ಕೆ ಧರ್ಮಸಭೆ ನಡೆಯಲಿದೆ ಸಾನಿದ್ಯವನ್ನು ಸಂಸ್ಥಾನ ಪಂಚಗ್ರಹ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಗವಿಮಠದ ಬಸವಲಿಂಗ ಸ್ವಾಮೀಜಿ, ನಾಗಲಿಂಗಸ್ವಾಮಿ ಮಠದ ವೀರೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸುವರು. ಟಿ.ವ್ಹಿ ಕಲಾವಿದ ಶರಣು ಯಮನೂರ ಹಾಗೂ ಜಾನಪದ ಸಂಜೀವಿನಿ ಹಾಸ್ಯ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಇವರಿಂದ ನಗೆಹಬ್ಬ ನಡೆಯಲಿದೆ.
ಜ-25 ರಂದು ಸಂಜೆ 5.30 ಕ್ಕೆ ಧರ್ಮಸಭೆ ಮನಗುಂಡಿ ಖ್ಯಾತ ನಿಸರ್ಗ ಚಿಕಿತ್ಸೆ ತಜ್ಞರು ಹಾಗೂ ಪ್ರವಚನ ಪ್ರವೀಣರಾದ ಬಸವಾನಂದ ಸ್ವಾಮೀಗಳು ಸಾನಿದ್ಯ ವಹಿಸಿ ಆಶೀರ್ವಾಚನ ನಿಡುವರು. ನಂತರ ಭಾವೈಕ್ಯ ಜಾನಪದ ಕಲಾವಿದ ಇಮಾಮಸಾಬ ವಲ್ಲೆಪ್ಪನವರ ಹಾಗೂ ಸಂಗಡಿಗರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಲಿದೆ.
ಜ-26 ಸಂಜೆ 5.30 ಕ್ಕೆ ಧರ್ಮಸಭೆ ಬಾಲೆಹೊಸೂರ- ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನ ಪೀಠ ಜಗದ್ಗರು ಫಕ್ಕೀರದಿಂಗಾಲೇಶ್ವರ ಸ್ವಾಮೀಜಿಗಳು ಸಾನಿದ್ಯ ವಹಿಸಿ ಆಶೀರ್ವಾಚನ ನೀಡಲಿದ್ದಾರೆ. ನಂತರ ಜಾನಪದ ಕಲಾವಿದೆ, ರಾಜ್ಯ ಪ್ರಶಸ್ತಿ ಪುರಸ್ಕ್ರತರು, ಬೆಳವಟಗಿ ಇವರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಲಿದೆ ಎಂದು ದೇವಸ್ಥಾನ ಕಮೀಟಿ ಅಧ್ಯಕ್ಷರಾದ ಎನ್.ವಾಯ್. ಬಾರಕೇರ ತಿಳಿಸಿದ್ದಾರೆ.