ದಿ. 21, 22 ರಂದು ಕರಾಟೆ ಪಂದ್ಯಾವಳಿ

ಹುಬ್ಬಳ್ಳಿ,ಜ19: ಎಕ್ಸಟ್ರೀಮ್ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಜ.21, 22 ರಂದು ಎರಡು ದಿನಗಳ ಇಂಟರ್ನ್ಯಾಷನಲ್ ಕರಾಟೆ ಓಪನ್ ಚಾಂಪಿಯನ್ ಶಿಪ್ ಪಂದ್ಯಾವಳಿಯನ್ನು ಇಲ್ಲಿನ ಗೋಕುಲರಸ್ತೆಯ ಗೋಕುಲ ಗಾರ್ಡನ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿಯ ಮುಖ್ಯಸ್ಥ ಕೆ.ಎಲ್.ದುರ್ಗಾನಂದ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಪ್ರಥಮ ಬಾರಿಗೆ ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ. ವೈಟ್ ದಿಂದ ಬ್ಲ್ಯಾಕ್ ಬೆಲ್ಟ್ ವರೆಗೆ ಪಂದ್ಯಾವಳಿಗಳು ನಡೆಯಲಿವೆ. ದೇಶ-ವಿದೇಶಗಳಿಂದ ಅಂದಾಜು 800-1000 ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪುರುಷ ಹಾಗೂ ಮಹಿಳೆಯರ ಕಾಟಾ ಹಾಗೂ ಕುಮೈಟೆ, ಟೀಮ್ ಕಾಟಾ, ಓಪನ್ ಚಾಂಪಿಯನ್ ಶಿಪ್ ಕಾಟಾ ಹಾಗೂ ಓಪನ್ ಚಾಂಪಿಯನ್ ಶಿಪ್ ಕುಮೈಟೆ ಹೀಗೆ ವಿವಿಧ ವಿಭಾಗದಲ್ಲಿ ಕರಾಟೆ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಐದು ವರ್ಷದಿಂದ 18 ವರ್ಷದ ಮಕ್ಕಳು ಹಾಗೂ 18 ವರ್ಷದ ಮೇಲ್ಪಟ್ಟವರು ಭಾಗವಹಿಸಬಹುದು ಎಂದು ಹೇಳಿದರು.
ಈ ಪಂದ್ಯಾವಳಿಯನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಉದ್ಘಾಟನೆ ಮಾಡಲಿದ್ದು, ಅತಿಥಿಗಳಾಗಿ ಉದ್ಯಮಿಗಳಾದ ವಿ.ಎಸ್.ವಿ ಪ್ರಸಾದ್ ಆಗಮಿಸುವರು, ವಿಶೇಷ ಆಹ್ವಾನಿತರಾಗಿ ಶಂಕರಪಾಟೀಲ ಮುನೇನಕೊಪ್ಪ, ಶ್ರೀಕಾಂತ್ ಮಲ್ಲೂರ ಸೇರಿದಂತೆ ಮುಂತಾದ ಗಣ್ಯಮಾನ್ಯರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚಳ್ಳಮರದ ಶೇಖ, ಗುಣಶೇಖರ, ಸುಧಾಕರ, ಆರೀಫ ಅಹ್ಮದ್ ಚಳ್ಳಮರದ, ತಬ್ರೇಜ್ ಖಾನ್, ಬಾಂಗ್ಲಾದೇಶದ ರಾಣಾ ಮುಂತಾದವರು ಉಪಸ್ಥಿತರಿದ್ದರು.