ದಿ.21 ರಂದು ಶ್ರೀ ಚಿದಂಬರೇಶ್ವರ ದೇವಸ್ಥಾನ ಉದ್ಘಾಟನೆ

ಲಕ್ಷ್ಮೇಶ್ವರ, ಮೇ20: ಚಿದಂಬರೇಶ್ವರ ದೇವಸ್ಥಾನದ ಉದ್ಘಾಟನೆ, ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ಹಾಗೂ ಕಳಸಾರೋಣ ಸಮಾರಂಭವು ದಿ. 21 ರವಿವಾರ ಮತ್ತು 22 ಸೋಮವಾರ ಜರುಗಲಿದೆ.
ದಿ.21 ರಂದು ಪಟ್ಟಣದ ಶಂಕರಭಾರತಿಮಠದಿಂದ ಮುಂಜಾನೆ 8 ಗಂಟೆಗೆ ನೂರಾರು ಪೂರ್ಣಕುಂಭಗಳು, ಸಕಲವಾಧ್ಯ ವೈಭವದೊಂದಿಗೆ ದೇವರ ಮೂರ್ತಿಗಳ ಮೆರವಣಿಗೆಯು 1 ನೇ ವಾರ್ಡನಲ್ಲಿ ನಿರ್ಮಾಣವಾಗಿರು ನೂತನ ದೇವಸ್ಥಾನದವರೆಗೆ ನಡೆಯಲಿದೆ. ನಂತರ ಮರುದಿನ ಸೋಮವಾರ ಮುಂಜಾನೆ 6 ಗಂಟೆಯಿಂದ ನೂತನ ವಿಗ್ರಹಗಳ ಸ್ಥಾಪನೆ ಮತ್ತು ಕಳಸಾರೋಹಣ ನೆರವೇರಲಿದ್ದು, ಅದ್ವೈತ ವಿದ್ಯಾಶ್ರಮದ ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ಪ್ರಣವಾನಂದ ತೀರ್ಥಸ್ವಾಮಿಗಳು, ಕೆಂಗೇರಿ ಮುರಗೋಡ ಮೂಲ ಮಹಾಕ್ಷೇತ್ರದ ಪೀಠಾಧಿಕಾರಿಗಳಾದ ಶ್ರೀ ಪರಮಪೂಜ್ಯ ದಿವಾಕರ ದೀಕ್ಷಿತರು, ಅಗಡಿ ಆನಂದವನ ಶ್ರೀ ವಿಶ್ವನಾಥ ಚಕ್ರವರ್ತಿಗಳು, ಕನವಳ್ಳಿಯ ಶ್ರೀ ಸುರೇಶ ಸಂತ ಪಾಟೀಲ ಮಹಾರಾಜರು, ಇವರ ದಿವ್ಯ ಸಾನಿಧ್ಯದಲ್ಲ, ನೆರವೇರಲಿದೆ. ನಂತರ ನಡೆಯುವ ಧರ್ಮಸಭೆಯಲ್ಲಿ ಸಂತರ ದಿವ್ಯ ಸಾನಿಧ್ಯ ಹಾಗೂ ಅನೇಕ ಮುಖಂಡರು, ಹಿರಿಯರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ದೇವಸ್ಥಾನ ಟ್ರಸ್ಟ್‍ನ ಕಾರ್ಯದರ್ಶಿ ಪ್ರಸನ್ನ ಕುಲಕರ್ಣಿ ತಿಳಿಸಿದ್ದಾರೆ.