ದಿ. 21 ರಂದು ಮಯೂರೋತ್ಸವ


ಹುಬ್ಬಳ್ಳಿ, ನ19: ಇಲ್ಲಿನ ಮಯೂರ ನೃತ್ಯ ಅಕಾಡೆಮಿಯಿಂದ ನ.21 ರಂದು ಸಂಜೆ 5:00 ಗಂಟೆಗೆ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾ ಭವನದಲ್ಲಿ ಮಯೂರೋತ್ಸವ-
2021 ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿದುಷಿ ಹೇಮಾ ವಾಘಮೋಡೆ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2005 ರಿಂದ ಮಯೂರ ನೃತ್ಯ ಅಕಾಡೆಮಿ ಮಕ್ಕಳಿಗೆ ನೃತ್ಯ ತರಬೇತಿ ನೀಡುತ್ತಿದ್ದು, 2013 ರಿಂದ ಮಯೂರೋತ್ಸವ ನೃತ್ಯ ಕಾರ್ಯಕ್ರಮ ಆಯೋಜನೆ ಮಾಡುತ್ತಾ ಬರುತ್ತಿದೆ. ಸಧ್ಯ ಹುಬ್ಬಳ್ಳಿಯಲ್ಲಿ ಐದು ಶಾಖೆಗಳು, ಲಕ್ಷೇಶ್ವರ, ಲಿಂಗಸೂರ ಹಾಗೂ ಕಲಘಟಗಿಯಲ್ಲಿ ಶಾಖೆ ತೆರೆಯುವ ಮೂಲಕ ಮಕ್ಕಳಿಗೆ ನೃತ್ಯ ತರಬೇತಿ ನೀಡಲಾಗುತ್ತಿದೆ.
ಸಂಸ್ಥೆಯಲ್ಲಿ ಒಟ್ಟು 600 ಕ್ಕೂ ಹೆಚ್ಚು ಮಕ್ಕಳು ನೃತ್ಯ ತರಬೇತಿ ಪಡೆಯುತ್ತಿದ್ದಾರೆ ಎಂದರು.
ಇದೇ ಸಮಾರಂಭದಲ್ಲಿ ಸಂಗೀತ ಕಲಾವಿದೆ ಡಾ.ಪದ್ಮಿನಿ ಓಕ್ ಅವರಿಗೆ ಮಯೂರ ಸನ್ಮಾನ ಮಾಡಿ ಗೌರವಿಸಲಾಗುವುದು.
ನ.21 ರಂದು ನಡೆಯುವ ಮಯೂರೋತ್ಸವ ನೃತ್ಯ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಶರ್ಮಿಳಾ ಹೊಸೂರ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಿನೇಶ ವಾಘಮೋಡೆ, ಎಚ್.ಎಸ್.ಕಿರಣ, ಮಾರುತಿ ಹುಟಗಿ ಇದ್ದರು.