
ಹುಬ್ಬಳ್ಳಿ,ಮೇ19 : ಗೋಸೇವಾ ಗತಿವಿಧಿ ಮತ್ತು ಆರೋಗ್ಯ ಭಾರತಿ ಕರ್ನಾಟಕ ಉತ್ತರ ಪ್ರಾಂತ ಹಾಗೂ ಪಂಚಗವ್ಯ ಆಯುರ್ವೇದ ವೈಜ್ಞಾನಿಕ ಸಮಾವೇಶ ಸಮಿತಿ ಆಶ್ರಯದಲ್ಲಿ ಪಂಚಗವ್ಯ ಆಯುರ್ವೇದ ಚಿಕಿತ್ಸಾ ವಿಚಾರ ಸಂಕಿರಣವನ್ನು ಮೇ 21 ರಂದು ನಗರದ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಸ್ವರ್ಣಾ ಗ್ರೂಪ್ ನ ಡಾ.ವಿ.ಎಸ್.ವಿ. ಪ್ರಸಾದ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಚಾರ ಸಂಕೀರ್ಣ ಕಾರ್ಯಕ್ರಮವು ಬೆ. 9 ರಿಂದ ಸಂಜೆ 5 ಗಂಟೆಯವರೆಗೆ ಜರುಗಲಿದ್ದು, ಕಾರ್ಯಕ್ರಮದ ಸಾನಿಧ್ಯವನ್ನು ಮೂರುಸಾವಿರಮಠದ ಶ್ರೀ ಗುರುಸಿದ್ಧರಾಜಯೋಗಿಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಮುಖ್ಯ ಉಪನ್ಯಾಸಕರಾಗಿ ಗುಜರಾತ್ ನ ಪಂಚಗವ್ಯ ಕ್ಲಿನಿಕಲ್ ರಜಿಸ್ಟ್ರಿ ಚೇರ್ಮನ್ ಡಾ. ಹಿತೇಶ್ ಜಾನಿ, ಗೋಸೇವಾ ಗತಿವಿಧಿಯ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖ ರಾಘವನ್ ಜಿ, ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪೆÇ್ರ. ಡಾ. ಆನಂದ ಶೆಟ್ಟಿ, ಪೆÇ್ರ. ಎಸ್. ರಾಮಚಂದ್ರ ಶೆಟ್ಟಿ, ಡಾ. ವಿಜಯಕುಮಾರ್ ಬಿರಾದಾರ್, ಡಾ. ಡಿ.ಪಿ.ರಮೇಶ್ ಹಾಗೂ ರಾಷ್ಟ್ರೀಯ ಸ್ವಯಂ ಸಂಘ ವಿಭಾಗದ ಸಂಘಚಾಲಕರಾದ ಗೋವಿಂದಪ್ಪ ಗೌಡಪ್ಪಗೌಡರ ಪಾಲ್ಗೊಳ್ಳಲಿದ್ದಾರೆ ಎಂದರು.
ಅಂದು ಸಂಜೆ 6 ಗಂಟೆಗೆ ಭಜನಾ ಸಂಧ್ಯಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಭಕ್ತಿ ಸಂಗೀತ ಸಾಮ್ರಾಟ್ ಪಂಡಿತ್ ಅಜಿತ್ ಕಡಕಡೆ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಲಿದ್ದು,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಬ್ಬಳ್ಳಿ ಅರ್ಬನ್ ಬ್ಯಾಂಕ್ ಚೇರ್ಮನ್ ಹಾಗೂ ಉದ್ಯಮಿಗಳಾದ ವಿಕ್ರಮ ಹೆಗಡೆ ವಹಿಸಲಿದ್ದಾರೆ.
ಇನ್ನೂ ಈ ವಿಚಾರ ಸಂಕಿರಣ ಹಾಗೂ ಭಜನಾಸಂಧ್ಯ ಕಾರ್ಯಕ್ರಮದಲ್ಲಿ ಆರೋಗ್ಯ ಪ್ರಾಂತ ಅಧ್ಯಕ್ಷರಾದ ಡಾ. ಸಿದ್ದನಗೌಡ ಪಾಟೀಲ್, ಗೋಸೇವಾ ಗತಿವಿದಿಯ ಪ್ರಾಂತ ಸಂಯೋಜಕರಾದ ರಾಮಕೃಷ್ಣ ಬುದ್ನಿ, ಸ್ವಾಗತ ಸಮಿತಿ ಅಧ್ಯಕ್ಷರು ಹಾಗೂ ಉದ್ಯಮಿಗಳಾದ ಡಾ. ವಿ.ಎಸ್.ವಿ. ಪ್ರಸಾದ್, ಧನ್ಯೋಸ್ಮಿ ಯೋಗಕೇಂದ್ರದ ನಿರ್ದೇಶಕರಾದ ವಿನಾಯಕ ತಲಗೇರಿ, ಅರುಣ್ ಉಪಕಾರಿ, ಭರತ್ ಬೇರುಲಾಲ್ ಜೈನ್, ಡಾ. ಬಸವರಾಜ್ ಬೆಂಬ್ಳಿ ಸೇರಿದಂತೆ ಪ್ರಮುಖರು ಆಗಮಿಸಲಿದ್ದಾರೆ ಎಂದರು.
ಕಾರ್ಯಕ್ರಮ ಸ್ಥಳದಲ್ಲಿ ಗವ್ಯೋತ್ಪನ್ನ ವಸ್ತುಗಳ ಮಾರಾಟ ವ್ಯವಸ್ಥೆ ಕಲ್ಪಿಸಲಾಗಿದೆ ಎಂದವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ವಿಜಯಕುಮಾರ್, ದತ್ತಾತ್ರೇಯ ಭಟ್, ಸುಬ್ರಹ್ಮಣ್ಯ ಶಿರಕೋಳ ಸೇರಿದಂತೆ ಉಪಸ್ಥಿತರಿದ್ದರು.