ದಿ. 19 ರಂದು ಆರೋಗ್ಯ ತಪಾಸಣೆ

ಧಾರವಾಡ,ನ14 : ಹುಟ್ಟುವ ಮಕ್ಕಳಿಗೆ ಬರುವ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಾಗೂ ಆರೋಗ್ಯ ತಪಾಸಣೆಯನ್ನು ನ. 19 ರಂದು ಹಮ್ಮಿಕೊಳ್ಳಲಾಗಿದೆ ಎಂದು ಡಾ. ಅನೀಲ ಹಲಗೇರಿ ತಿಳಿಸಿದರು.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ, ಧಾರವಾಡ ಮತ್ತು ಸ್ಪೈನಾ ಬೈಫಿಡ ಫೌಂಡೇಶನ್, ಮುಬೈ ಇವರ ಜಂಟಿ ಸಹಯೋಗದಲ್ಲಿ ಈ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದರು.

ತಾಯಿ ಗರ್ಭದಲ್ಲಿರುವ ಮಗುವಿನ ಬೆನ್ನು ಹುರಿಯ ಬೆಳವಣಿಗೆಯು ಕುಂಠಿತವಾದಾಗ ಅಂಥವರಲ್ಲಿ ಬೆನ್ನಿನ ಕೆಳಭಾಗದಲ್ಲಿ ಗಂಟು ಕಾಣಿಸಿಕೊಳ್ಳಬಹುದು ಈ ಭಾಧೆಯು ಸ್ಪೀನಾ ಬಿಫಿದಾ ಎಂದು ಕರೆಯಲ್ಪಡುತ್ತದೆ. ನರಗಳ ದೋಷದಿಂದಾಗಿ ಈ ಅಂಗಾಂಗಗಳಲ್ಲಿ ಸಮಸ್ಯೆ ಕಂಡುಬರುತ್ತದೆ. ಕಾಲಿನಲ್ಲಿ ಸ್ವಾಧೀನ ಇಲ್ಲದಿರುವುದು ಮಲ ಮೂತ್ರ ನಿಯಂತ್ರಣ ಕೊರತೆ ಇರುವುದು, ವಕ್ರಪಾದದ ಸಮಸ್ಯೆ ಈ ಎಲ್ಲ ಸಮಸ್ಯೆ ಕಂಡು ಬರುತ್ತದೆ. ಗರ್ಭಾವಸ್ಥೆಯಲ್ಲಿ ಸ್ತ್ರೀಯರಲ್ಲಿ ಫೆÇೀಲಿಕ್ ಆಸಿಡ್, ವಿಟಮಿನ್ ಬಿ12 ಮುಂತಾದ ಪೌಷ್ಟಿಕಾಂಶದ ಕೊರತೆಯಿಂದ ಈ ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದರು.