ದಿ. 18 ರಂದು ಮಹಾ ರಥೋತ್ಸವ

ಲಕ್ಷ್ಮೇಶ್ವರ, ಮೇ16: ಪಟ್ಟಣದ ಐತಿಹಾಸಿಕ ಪ್ರಸಿದ್ಧ ಮತ್ತು ಪುಲಿಗೆರೆ ಯ ಆರಾಧ್ಯ ದೈವ ಸೋಮೇಶ್ವರ ದೇವಸ್ಥಾನದ ಮಹಾರಥೋತ್ಸವ ದಿ. 18 ರಂದು ಶನಿವಾರ ಅತ್ಯಂತ ವೈಭವ ಸಂಭ್ರಮದಿಂದ ಜರುಗಲಿದೆ.
ಇದರ ಅಂಗವಾಗಿ ದಿ. 17ರಂದು ಶುಕ್ರವಾರ ಸಂಜೆ 7 ಗಂಟೆಗೆ ಶ್ರೀ ಸೋಮೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದಿನಾಂಕ 18 ರಂದು ಪ್ರಾಥಕಾಲ 6:00ಗೆ ಶನಿವಾರ ಸಕಲ ದ್ರವ್ಯಗಳಿಂದ ಶ್ರೀ ಸೋಮನಾಥನಿಗೆ ರುದ್ರಾಭಿಷೇಕ ನಡೆಯುತ್ತದೆ. 9:30ಕ್ಕೆ ಮಹಾಮಂಗಳಾರತಿ ಜರುಗುವುದು. ಸಾಯಂಕಾಲ 5:30ಕ್ಕೆ ಸೋಮೇಶ್ವರ ಮಹಾರಥೋತ್ಸವ ಜರುಗಲಿದೆ.
ದಿನಾಂಕ 19 ರಂದು ಕಡುಬಿನ ಕಾಳಗ ಮತ್ತು ದಿನಾಂಕ 20 ರಂದು ಓಕಳಿ ಕಾರ್ಯಕ್ರಮ ನಡೆಯುವುದು ದಿನಾಂಕ 18ರಿಂದ 20ರವರೆಗೆ ಮೂರು ದಿನಗಳ ಕಾಲ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ ಕ್ಷೀರಾಭಿಷೇಕ ರುದ್ರಾಭಿಷೇಕ ಜರುಗಲಿದೆ ಮತ್ತು ಮೂರು ದಿನಗಳ ಕಾಲ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ ಶ್ರೀ ಸೋಮೇಶ್ವರ ಜಾತ್ರಾ ಮಹೋತ್ಸವ ಕಮಿಟಿ ಶ್ರೀ ಸೋಮೇಶ್ವರ ಸೇವಾ ಟ್ರಸ್ಟ್ ಕಮಿಟಿ ಮತ್ತು ಪ್ರಧಾನ ಅರ್ಚಕರು ಪ್ರಕಟಣೆಯಲ್ಲಿ ತಿಳಿಸಿದ್ದು ಭಕ್ತಾದಿಗಳು ಆಗಮಿಸಿ ಶ್ರೀ ಸೋಮೇಶ್ವರ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದ್ದಾರೆ.