ದಿ.17 ರಿಂದ ಜೈಂಟ್ಸ್ ಸಪ್ತಾಹ


ಹುಬ್ಬಳ್ಳಿ ,ಸೆ.15: ಜೈಂಟ್ಸ್ ಗ್ರೂಪ್ ಆಫ್ ಹುಬ್ಬಳ್ಳಿ ಶಹರ ಇವರ ಆಶ್ರಯದಲ್ಲಿ ಜೈಂಟ್ಸ್ ಸಪ್ತಾಹ ಆಚರಣೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಸೆ. 17 ರಿಂದ 23 ರ ವರೆಗೆ ಆಯೋಜನೆ ಮಾಡಲಾಗಿದೆ ಎಂದು ಡಾ. ಜೈಂಟ್ಸ್ ಗ್ರೂಪ್ ಆಫ್ ಹುಬ್ಬಳ್ಳಿ ಶಹರ ಅಧ್ಯಕ್ಷ ಡಾ. ಮನೋಜ್ ಭಟ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜೈಂಟ್ಸ್ ಸಪ್ತಾಹ ಅಂಗವಾಗಿ ಸೆ. 17 ರಂದು ಬೆ. 9 ಗಂಟೆಗೆ ನಗರದ ಗೋಕುಲ್ ರಸ್ತೆಯಲ್ಲಿರುವ ಜೈಂಟ್ಸ್ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮುಖ್ಯ ಅತಿಥಿಗಳಾಗಿ ಉದ್ಯಮಿ ಡಾ. ವಿ. ಎಸ್.ವಿ. ಪ್ರಸಾದ್ ಅವರ ಆಗಮಿಸಲಿದ್ದು, ನಂತರ ಸಂಜೆ 7 ಗಂಟೆಗೆ ಜೈಂಟ್ಸ್ ಶಹರದ ಹುಬ್ಬಳ್ಳಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಲಿದೆ. ಮುಖ್ಯ ಅತಿಥಿಗಳಾಗಿ ಮುಂಬೈನ ಜೈಂಟ್ಸ್ ವೆಲಫೇರ್ ಫೌಂಡೇಶನ್ ವಿಶೇಷ ಸದಸ್ಯರಾದ ದಿನಕರ್ ಅಮೀನ್ ಅವರು ಆಗಮಿಸಲಿದ್ದಾರೆ ಎಂದರು.
ಇನ್ನೂ ನೂತನ ಅಧ್ಯಕ್ಷರಾಗಿ ಡಾ. ಮನೋಜ್ ಭಟ್, ಕಾರ್ಯದರ್ಶಿಯಾಗಿ ವಸಂತ್ ನಾಯ್ಕ್ ಮತ್ತು ಖಜಾಂಚಿಯಾಗಿ ಅಂಬೇಶ ಊಟವಾಲೆ ಮತ್ತು ಉಳಿದ ಪದಾಧಿಕಾರಿಗಳು ಅಧಿಕಾರ ಗ್ರಹಣ ಮಾಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಂಬೇಶ ಊಟವಾಲೆ, ವಸಂತ ನಾಯಕ್, ಸೇರಿದಂತೆ ಉಪಸ್ಥಿತರಿದ್ದರು.