ದಿ.17 ರಂದು ರೈತ ಜಾಗೃತಿ ಸಮಾವೇಶ

ಹುಬ್ಬಳ್ಳಿ,ಮಾ13: ರೈತ ಸೇನಾ ಕರ್ನಾಟಕ ರಾಜ್ಯ ಸಮಿತಿ ನರಗುಂದ ವೇದಿಕೆಯ ನೇತೃತ್ವದಲ್ಲಿ ಬೃಹತ್ ರೈತ ಜಾಗೃತಿ ಸಮಾವೇಶವನ್ನು ಮಾರ್ಚ್ 17 ರಂದು ಮಧ್ಯಾಹ್ನ 3.30 ಕ್ಕೆ ನರಗುಂದದ ಮಹದಾಯಿ ಕಳಸಾ-ಬಂಡೂರಿ ಹೋರಾಟ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸೇನಾ ಕರ್ನಾಟಕ ರಾಜ್ಯ ಸಮಿತಿಯ ರಾಜ್ಯಾಧ್ಯಕ್ಷರಾದ ವಿರೇಶ್ ಸೊಬರದಮಠ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಇಚ್ಛಾ ಶಕ್ತಿ ಕೊರತೆಯಿಂದಾಗಿ ರೈತರ ಪ್ರಾಮಾಣಿಕ ಬೇಡಿಕೆ ಈಡೇರಿಲ್ಲ. ಜನರು ಹಾಗೂ ರೈತರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಮಾವೇಶ ಆಯೋಜಿಸಲಾಗಿದೆ.
ಸರ್ಕಾರದ ಸುಳ್ಳು ಭರವಸೆ, ನಿಷ್ಕ್ರಿಯಗೊಂಡಿರುವ ವಿರೋಧ ಪಕ್ಷಗಳಿಂದ ಜನರು ರೋಸಿ ಹೋಗಿದ್ದಾರೆ. ಇಂದು ರಾಜಕೀಯ ಶಕ್ತಿ ಅಗತ್ಯವಾಗಿದ್ದು, ಆ ನಿಟ್ಟಿನಲ್ಲಿ ಸಮಾವೇಶದಲ್ಲಿ ಚರ್ಚೆ ನಡೆಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗುರು ರಾಯನಗೌಡ್ರ, ಮುತ್ತು ಪಾಟೀಲ್, ಶರೀಫ್ ಕಲಬುರಗಿ, ಶೇಖಣ್ಣಾ ಹೂಲಿಕಟ್ಟಿ, ಮುಶಪ್ಪಗೌಡ ರಾಯನಗೌಡ್ರ ಉಪಸ್ಥಿತರಿದ್ದರು.