ದಿ.15 ರಂದು ಚಿಂತನ-ಮಂಥನ ಹಕ್ಕೊತ್ತಾಯ ಸಭೆ


ಹುಬ್ಬಳ್ಳಿ,ಜೂ.13: ವೀರಶೈವ ಲಿಂಗಾಯತ ಮಠಾಧೀಶರ ವೇದಿಕೆ ವತಿಯಿಂದ ನಾಡಿನ ಗುರು-ವಿರಕ್ತ ಪರಂಪರೆಯ ಪೀಠ-ಮಠಗಳ ಹಾಗು ಮಠಾಧೀಶರು ಒಗ್ಗೂಡಿ ಶೈಕ್ಷಣಿಕ ಹಾಗೂ ಉದ್ಯೋಗದ ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಈಗಾಗಲೇ ಶೇ.27% ನಷ್ಟಿರುವ ಕೇಂದ್ರದ ಹಿಂದುಳಿದ ವರ್ಗಗಳ ಮೀಸಲಾತಿ (ಔ.ಃ.ಅ) ಪಟ್ಟಿಯಲ್ಲಿನ ವೀರಶೈವ-ಲಿಂಗಾಯತ ಸಮಾಜದ ಹಲವು ಉಪಪಂಡಗಳ ಜೊತೆಗೆ ಸಮಸ್ತ ವೀರಶೈವ ಲಿಂಗಾಯತದ ಉಳಿದ ಎಲ್ಲಾ ಉಪ ಪಂಗಡಗಳನ್ನು ಸಹ ಕೇಂದ್ರ ಸರ್ಕಾರದ ಔ.ಃ.ಅ ಪಟ್ಟಿಗೆ ಸೇರಿಸಿ ಅಖಂಡ ಮೀಸಲಾತಿ ಕಲ್ಪಿಸಿ ಸಮಾಜದ ಯುವಕ-ಯುವತಿಯರಿಗೆ ಕೇಂದ್ರದ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಸಲುವಾಗಿ ನಾಡಿನ ಜಗದ್ಗುರುಗಳು ಹಾಗು ಮಠಾಧೀಶರು ಮತ್ತು ಸಮಾಜದ ಆಯಾ ಉಪ ಪಂಗಡಗಳ ಸಂಘ ಸಂಸ್ಥೆಗಳ ಮುಖಂಡರ ಜೊತೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಲು ಇದೇ ದಿನಾಂಕ 15-06-2023ರ ಗುರುವಾರದಂದು ಬೆಳಗ್ಗೆ 10 ಘಂಟೆಗೆ ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಚಿಂತನ-ಮಂಥನ ಹಾಗೂ ಹಕ್ಕೊತ್ತಾಯ ಸಭೆ” ಆಯೋಜಿಸಲಾಗಿದೆ.
ಸಮಸ್ತ ವೀರಶೈವ-ಲಿಂಗಾಯತ ಸಮಾಜದ ಎಲ್ಲ ಬಂಧುಗಳು ಸಭೆಗೆ ತಪ್ಪದೇ ಆಗಮಿಸಿ ತಮ್ಮ ಅತ್ಯಮೂಲ್ಯವಾದ ಸಲಹೆ-ಸಹಕಾರ ನೀಡಿ ಸಭೆಯನ್ನು ಯಶಸ್ವಿಗೊಳಿಸುವಂತೆ ಇಂದು ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಈ ಕಾರ್ಯಕ್ರಮದ ನೇತೃತ್ವವನ್ನು ಹುಬ್ಬಳ್ಳಿಯ ಮೂರುಸಾವಿರಾಮಠದ ಜಗದ್ಗುರುಗಳು,ಶ್ರೀಶೈಲ್ ಪೀಠದ ಜಗದ್ಗುರುಗಳು, ಕಾಶಿ ಪೀಠದ ಜಗದ್ಗುರುಗಳು ಉಜ್ಜಯಿನಿ ಪೀಠದ ಜಗದ್ಗುರುಗಳು,ಮುಂಡರಗಿಯ ಜಗದ್ಗುರುಗಳು,ನಿಡೆಸೋಸಿ ಮಠದ ಜಗದ್ಗುರುಗಳು,ಶಿರಹಟ್ಟಿ ಜಗದ್ಗುರುಗಳು ಒಳಪಂಗಡಗಳ ಕುಂಚಟಿಗ ಪೀಠದ ಜಗದ್ಗುರುಗಳು, ಮಡಿವಾಳ ಪೀಠದ ಜಗದ್ಗುರುಗಳು, ಕುಂಬಾರ ಪೀಠದ ಜಗದ್ಗುರುಗಳು, ಅಂಬಿಗರ ಚೌಡಯ್ಯ ಪೀಠದ ಜಗದ್ಗುರುಗಳು, ಹಡಪದ ಪೀಠದ ಜಗದ್ಗುರುಗಳು, ಹಾಗೂ ಅಕ್ಕಿ ಆಲೂರ್ ಶ್ರೀಗಳು ಬೆಂಗಳೂರಿನ ವಿಭೂತಿಪುರ ಮಠದ ಶ್ರೀಗಳು, ಕೊಟ್ಟೂರ ಶ್ರೀಗಳು, ತುಪ್ಪದ ಕುರಹಟ್ಟಿಯ ಶ್ರೀಗಳು, ತಿಪಟೂರ್ ರುದ್ರಮನಿ ಶ್ರೀಗಳು, ಚಳಗೇರಿ ಶ್ರೀಗಳು, ಗೊಲ್ಲಹಟ್ಟಿ ಶ್ರೀಗಳು, ಹಾಗೂ ರಾಜ್ಯದ ಎಲ್ಲಾ ಒಳಪಂಗಡಗಳ ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ಸಭೆಯ ಸಾನಿಧ್ಯ ವಹಿಸಿದ್ದ ಅಕ್ಕಿ ಆಲೂರು ಮಠ ಹಾಗೂ ಚನ್ನಗಿರಿ ಮಠದ ಶ್ರೀಗಳು ತಿಳಿಸಿದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಂಘಟನೆಯ ಪ್ರಕಾಶ್ ಬೆಂಡಿಗೇರಿ, ವೀರಶೈವ ಲಿಂಗಾಯತ ಒಳಪಗಡಗಳ ಒಕ್ಕೂಟದ ರಾಜಶೇಖರ್ ಮೆಣಸಿನಕಾಯಿ, ಡಾ. ಶರಣಪ್ಪ ಕೋಟಗಿ, ಪ್ರಕಾಶಗೌಡ ಪಾಟೀಲ್, ಬಂಗಾರೇಶ್ ಹಿರೇಮಠ್, ಸುರೇಶ ಸವಣೂರ, ಮೂರುಸಾವಿರಾಮಠದ ಸಮಿತಿಯ ಅರವಿಂದ್ ಕುಬಸದ್,ವಿಜಯ್ ಶೆಟ್ಟರ, ಧಾರವಾಡ ಜಿಲ್ಲಾ ಕುರುವಿನ ಶೆಟ್ಟಿ, ಸಮಾಜದ ಅಧ್ಯಕ್ಷ ಎಂ ಪಿ ಶಿವಕುಮಾರ್, ಆದಿ ಬಣಜಿಗರ ಸಮಾಜದ ಸದಾಶಿವ ಕಾರಡಗಿ,ಅಪ್ಪಣ್ಣ ಹಳ್ಳದ,ಮಲ್ಲನಗೌಡ ಬಿರಾದಾರ್,ಶಂಕರ್ ನೇಗಿನಹಾಳ್,ಬಿ.ಎಸ್. ಬಿರಾದಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.