ದಿ.14 ರಂದು ಹಾಸ್ಯೋತ್ಸವ

ಹುಬ್ಬಳ್ಳಿ,ಜ9: ನಗರದ ಆಲ್ ಇಂಡಿಯಾ ಜೈನ್ ಯುಥ್ ಫೆಡರೇಶನ್ ಹಾಗೂ ಆಲ್ ಇಂಡಿಯಾ ಶ್ವೇತಾಂಬರ ಸ್ಥಾನಿಕವಾಸಿ ಜೈನ್ ಕಾನ್ಪರೆನ್ಸ್ ಹೊಸ ದಿಲ್ಲಿ ಅವರ ಸಂಯುಕ್ತ ಆಶ್ರಯದಲ್ಲಿ ಹಾಸ್ಯೋತ್ಸವ – 2023 ನ್ನು ಜ.14 ರಂದು ಸಂಜೆ 6.45 ಕ್ಕೆ ಇಲ್ಲಿನ ಕೇಶ್ವಾಪುರದ ಸಂಸ್ಕಾರ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಲಿಂಬ್ ಸೆಂಟರ್ ಅಧ್ಯಕ್ಷ ಮಹೇಂದ್ರ ಸಿಂಘಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆಯೂ ನಮ್ಮ ಸಂಸ್ಥೆಗಳಿಂದ ಕವಿ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು. ನಂತರದಲ್ಲಿ ಕೋವಿಡ್ ಕಾರಣಾಂತರಗಳಿಂದ ಮೂರು ದಿನಗಳಿಂದ ಯಾವುದೇ ಕಾರ್ಯಕ್ರಮ ಮಾಡಲು ಸಾಧ್ಯವಾಗಿದ್ದಿಲ್ಲ. ಇದೀಗ ಒತ್ತಡದ ಜೀವನದ ಮಧ್ಯೆ ಕೆಲವು ಸಮಯವಾದರೂ ಸಂತೋಷ ನೀಡುವ ಉದ್ದೇಶದಿಂದ ಮಕರ ಸಂಕ್ರಾಂತಿಯ ಹಬ್ಬದ ಆಚರಣೆ, ಹಿಂದಿ ಸಾಹಿತ್ಯ ಸಮ್ಮೇಳನದ ಹಾಗೂ ಹಾಸ್ಯ ಸಂಜೆ ಹಾಸ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.
ಈ ಹಾಸ್ಯೋತ್ಸವ ಕಾರ್ಯಕ್ರಮಕ್ಕೆ ದೇಶದ ಪ್ರಸಿದ್ದ ಸಾಹಿತಿಗಳು ಹಾಗೂ ಹಾಸ್ಯ ಕವಿಗಳಾದ ಪದ್ಮಶ್ರೀ ಡಾ.ಸುರೇಂದ್ರ ಶರ್ಮಾ, ಇಂದೋರಿನ ಡಾ.ಭುವನ ಮೋಹಿಣಿ, ಜಾನಿ ಬೈರಾಗಿ, ಉಜ್ಜಯನಿಯ ಹಿಮಾಂಶು ಭವಂಡರ, ಜೈಪುರದ ಕಮಲ ಮನೋಹರ, ಇಟ್ವಾದ ರಾಮ ಭಧಾವರ ಸೇರಿದಂತೆ ಮುಂತಾದವರು ಆಗಮಿಸಲಿದ್ದಾರೆ. ಇದರ ಜೊತೆಗೆ ಹಾಸ್ಯೋತ್ಸವದಲ್ಲಿ ಸುಮಾರು 700-800 ಜನರು ಪಾಲ್ಗೊಳ್ಳಲು ನಿರೀಕ್ಷೆ ಇದೆ. ಉತ್ತರ ಕರ್ನಾಟಕ ಭಾಗದ ರಾಜಕಾರಣಿಗಳು, ವಿವಿಧ ಇಲಾಖಾ ಅಧಿಕಾರಿಗಳು ಸೇರಿದಂತೆ ಮುಂತಾದ ಗಣ್ಯಮಾನ್ಯರು ಆಗಮಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗೌತಮ ಗುಲೇಚ್ಚಾ, ಬಾಬುಲಾಲ ಪಾರೇಖ, ಮಗರಾಜ ಭಲಗಟ, ಸುಶೀಲ ಕಟಾರಿಯಾ, ಪ್ರಕಾಶ ಭಾಪನಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.