ದಿ.13 ರಂದು ಸಾಮೂಹಿಕ ಗುಗ್ಗಳ


ಮುನವಳ್ಳಿ,ಎ.8: ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ದಿ.13 ರಂದು ಮುಂಜಾನೆ 6 ಗಂಟೆಗೆ ಸಾಮೂಹಿಕ ಗುಗ್ಗಳ ಕಾರ್ಯಕ್ರಮ ಎರ್ಪಡಿಸಲಾಗಿದೆ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಧ್ಬಕ್ತರು ಗುಗ್ಗಳವನ್ನು ಮಾಡಿಕೊಳ್ಳುವವರು ಶ್ರೀ ವೀರಭದ್ರೇಶ್ವರ ದೇವಸ್ಥಾನದ ಕಾರ್ಯಲಯಕ್ಕೆ ಬಂದು ಹೆಸರುಗಳನ್ನು ನೋಂದಾಯಿಸಬೇಕು ಪ್ರತಿ ಗುಗ್ಗಳಕ್ಕೆ 2100 ರೂ ಗಳನ್ನು ಪಾವತಿಸಬೇಕು.
ಅಂದು ಸಂಜೆ 5 ಗಂಟೆಗೆ ಶಿಂದೋಗಿ ಮುನವಳ್ಳಿ ಗೋ ಕೈಲಾಸ ಮಂದಿರದ ಗೋವುಗಳನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಯ್ದು ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜಿಸಲಾಗುವದು ಕಾರಣ ಗೋವುಗಳ ಪೂಜೆಯನ್ನು ಮಾಡುವ ಭಕ್ತಾದಿಗಳು ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಪೋ: 9916897932, 9008206676 ಗೆ ಸಂಪರ್ಕಿಸಬಹುದು ಎಂದು ದೇವಸ್ಥಾನ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.