ದಿ. 13ರಂದು ಹರ ಘರ ತಿರಂಗಾ ಅಭಿಯಾನ ಪಥಸಂಚಲನ

ಹುಬ್ಬಳ್ಳಿ, ಆ 4: ನಗರದ ಚಿನ್ಮಯ ಕಾಲೇಜ್, ಹಮ್ ಭಾರತಿ ಫೌಂಡೇಶನ್, ಸ್ವರನಾದ ಹುಬ್ಬಳ್ಳಿ ಹಾಗೂ ನಕ್ಷತ್ರ ಟೆಕ್ನಾಲಜಿಸ್ ಸಹಯೋಗದೊಂದಿಗೆ ಇದೇ ದಿ. 13 ರಂದು ಮುಂಜಾನೆ 10 ಗಂಟೆಗೆ ಹರ ಘರ ತಿರಂಗಾ ಅಭಿಯಾನ ಪಥಸಂಚಲನ ಹಮ್ಮಿಕೊಳ್ಳಲಾಗಿದೆ ಎಂದು ಹಮ್ ಭಾರತಿ ಫೌಂಡೇಶನ್ ಅಧ್ಯಕ್ಷರಾದ ಅನ್ವರ ಮುಲ್ಲಾ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಪಥಸಂಚಲನ ಚಿನ್ಮಯಿ ಕಾಲೇಜಿನ ಆವರಣದಿಂದ ಹೊರಟು ಕೇಶ್ವಾಪೂರ, ದೇಸಾಯಿ ವೃತ್ತದಿಂದ ಚೆನ್ನಮ್ಮ ವೃತ್ತದವರೆಗೂ ಬಂದು ಮುಕ್ತಾಯವಾಗಲಿದೆ. ರಾಷ್ಟ್ರಭಕ್ತರು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಸುಮಾರು 500 ವಿದ್ಯಾರ್ಥಿಗಳು 150 ಅಡಿ ಉದ್ದದ ರಾಷ್ಟ್ರಧ್ವಜದ ಜೊತೆಗೆ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದವರೆಗೆ ಕಾಲ್ನಡಿಗೆಯಲ್ಲಿ ತಲುಪಲಿದೆ. ಜೊತೆಗೆ 21 ಉದ್ದ 14 ಅಡಿ ಅಗಲದ ಬೃಹತ್ ರಾಷ್ಟ್ರಧ್ವಜವನ್ನು ಸಹ ಪ್ರದರ್ಶಿಸಿ ರಾಷ್ಟ್ರಗೀತೆಯೊಂದಿಗೆ ಪಥಸಂಚಲನ ಮುಕ್ತಾಯಗೊಳ್ಳಲಿದೆ ಎಂದರು.
75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಅಂದು ಮನೆ ಮನೆಗಳಲ್ಲಿ ರಾಷ್ಟ್ರಧ್ವಜಾರೋಹಣದೊಂದಿಗೆ ಆಚರಿಸಬೇಕು ಮತ್ತು ತಮ್ಮ ಮಕ್ಕಳಲ್ಲಿ ಸ್ವಾತಂತ್ರ್ಯೋತ್ಸವದ ಮಹತ್ವ ಹಾಗೂ ರಾಷ್ಟ್ರ ವೀರರ, ಸ್ವಾತಂತ್ರ್ಯ ಹೋರಾಟಗಾರರ ಸಮ್ಮಾನ ಮತ್ತು ಅರಿವು ಮೂಡಿಸಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚಿನ್ಮಯ ಕಾಲೇಜಿನ ಪ್ರಾಂಶುಪಾಲರಾದ ವಿನಾಯಕ ಬ.ಕ, ರಾಘವೇಂದ್ರ, ಮುತಾಲಿಕ್ ದೇಸಾಯಿ, ಸಯಲಿ, ಅಶೋಕ ತೆಲಗಾರ, ಶೈಲೈಂದ್ರ ಉಪಸ್ಥಿತರಿದ್ದರು.