ದಿ.11 ರಂದು ಗುರುವಂದನಾ ಕಾರ್ಯಕ್ರಮ

ನವಲಗುಂದ,ಸೆ9 : ಪಟ್ಟಣದ ಮಾಡೆಲ್ ಹೈಸ್ಕೂಲ್‍ನಲ್ಲಿ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಸೆ.11 ರಂದು ಭಾನುವಾರ ಬೆಳಿಗ್ಗೆ 10 ಘಂಟೆಗೆ ಮಾಡೆಲ್ ಹೈಸ್ಕೂಲ್ ಸಭಾ ಭವನದಲ್ಲಿ ಜರುಗಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯೋಧ್ಯಾಪಕರು ಮಾಡೆಲ್ ಹೈಸ್ಕೂಲ್ ವಹಿಸಲಿದ್ದು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಪದ್ಮರಾಜ ಎನ್.ದೇಸಾಯಿ ಅವರು ಆಗಮಿಸಲಿದ್ದಾರೆ. ಹಾಗೂ ಬೆಂಗಳೂರು ಸೃಜನಶೀಲ ಅದ್ಯಾಪನ ಕೇಂದ್ರದ ಶಿಕ್ಷಣ ತಜ್ಞರು ಮುಖ್ಯಸ್ಥರಾದ ಡಾ.ಗುರುರಾಜ ಕರ್ಜಗಿ, ಡಿ.ವಾಯ್.ಎಸ್.ಪಿ ರಾಜ್ಯ ಗುಪ್ತವಾರ್ತೆ ಎಲ್.ವೈ.ಶಿರಕೋಳ ಅವರು ಆಗಮಿಸುತ್ತಾರೆ. ಇದೇ ಸಂದರ್ಭದಲ್ಲಿ ಗೌರವಾನ್ವಿತ ಸನ್ಮಾನಿತರಾದ ಮಾಡೆಲ್ ಹೈಸ್ಕೂಲ್ ಗುರುಬಳಗಕ್ಕೆ ಸನ್ಮಾನಿಸಲಾಗುವುದು.