ದಿ.11 ರಂದು ಖಜಾರಿಯಾ ಟೈಲ್ ಶೋರೂಂ ಉದ್ಘಾಟನೆ

ಹುಬ್ಬಳ್ಳಿ,ಜ8 : ಇಂಟಿಗ್ರೇಟೆಡ್ ಗ್ರೆನೆಟ್ಸ್ ಆಂಡ್ ಮಾರ್ಬಲ್ಸ್ (ಐಜಿಎಂ) ಸಂಸ್ಥೆಯ ಖಜಾರಿಯಾ ಟೈಲ್ ಶೋರೂಂ ಉದ್ಘಾಟನಾ ಸಮಾರಂಭವನ್ನು ಜನೆವರಿ 10 ರಂದು ಬೆ. 11 ಗಂಟೆಗೆ ನಗರದ ವಿದ್ಯಾನಗರದಲ್ಲಿರುವ ಜಾಬಿನ್ ಕಲೇಜಿನ ಎದುರುಗಿನ ಐಜಿಎಂ ಟೈಟಲ್ ವರ್ಲ್ಡ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಲೀಕರಾದ ದೀಪಕ ಕಟ್ಟಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಗಮಿಸಲಿದ್ದಾರೆಂದರು.
ಮುಖ್ಯ ಅತಿಥಿಗಳಾಗಿ ರಾಮಕೃಷ್ಣ ಕೆ.ಪಿ, ದೀಪಕ್ ಕಟ್ಟಿ, ಅಶೋಕ ಕೊಂಗಟ್ಟಿ ಸೇರಿದಂತೆ ಮುಂತಾದವರು ಆಗಮಿಸಲಿದ್ದಾರೆ ಎಂದರು.