ಹುಬ್ಬಳ್ಳಿ, ಜು9: ರೋಟರಿ ಕ್ಲಬ್ ಪಶ್ಚಿಮ ಹುಬ್ಬಳ್ಳಿ 2023-24ನೇ ಸಾಲಿನ ಅಧ್ಯಕ್ಷರಾಗಿ ಚನ್ನಬಸಪ್ಪ (ಅಪ್ಪಾಜಿ) ಬತ್ಲಿ, ಕಾರ್ಯದರ್ಶಿಯಾಗಿ ರಾಜೇಶ ವಾಂಡಕರ, ಹಾಗೂ ಖಜಾಂಚಿಯಾಗಿ ಬಸವರಾಜ ಬೆಲ್ಲದ ಆಯ್ಕೆಯಾಗಿದ್ದಾರೆ. ದಿನಾಂಕ: 10ರಂದು ಹುಬ್ಬಳ್ಳಿಯ ಕ್ಲಬ್ ರೋಡಿನಲ್ಲಿರುವ ಜಿಮಖಾನಾ ಕ್ಲಬ್‍ನಲ್ಲಿ ಪದಗ್ರಹಣ ಸಮಾರಂಭ ಏರ್ಪಡಿಸಲಾಗಿದೆ. ಪಿ.ಡಿ.ಜಿ ರೋಟರಿಯನ್ ಡಾ: ಪ್ರಾಣೀಶ ಜಾಗೀರದಾರರವರು ಪ್ರಮಾಣ ವಚನ ಬೋಧಿಸುವರು. ಅತಿಥಿಯಾಗಿ ಎ.ಜಿ. ಸೈಮನ್ ಡಿಸೋಜಾ, ಉಪಸ್ಥಿತರಿರುವರೆಂದು ಕ್ಲಬ ಅಧ್ಯಕ್ಷ ಚಂದ್ರಕಾಂತ ಮಿಸ್ಕಿನ್ ತಿಳಿಸಿರುವರು.