ದಿ.೨೬ : ಗಂಗಾಮತಸ್ಥ ಸಮಾಜದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಲಿಂಗಸೂಗೂರು.ನ.೧೮- ಕರ್ನಾಟಕ ರಾಜ್ಯ ಗಂಗಾಮತಸ್ಥ ಸಮಾಜದ ನೌಕರರ ಸಂಘದ ವತಿಯಿಂದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಬಾಗಲಕೋಟೆಯಲ್ಲಿ ನಡೆಯಲಿದೆ ಎಂದು ತಾಲೂಕ ಅಧ್ಯಕ್ಷ ಅಮರೇಶ ಕಲ್ಲೂರ ತಿಳಿಸಿದರು.
ಸ್ಥಳೀಯ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಇದೇ ೨೬-೧೧-೨೦೨೩ ರಂದು ಬಾಗಲಕೋಟೆಯಲ್ಲಿ ಕರ್ನಾಟಕ ರಾಜ್ಯ ಗಂಗಾಮತಸ್ಥ ಸಮಾಜದ ನೌಕರರ ಸಂಘದ ವತಿಯಿಂದ ಶೇಕಡಾ ೯೦ ಪರ್ಸೆಂಟ್ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು, ಆದ್ದರಿಂದ ತಾಲೂಕಿನ ಗಂಗಾಮತ ಸಮಾಜದ ಮುಖಂಡರು ಹಾಗೂ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ ೯೦ ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಮಾಹಿತಿಯನ್ನು ಸಮಾಜದ ನೌಕರ ಸಂಘದ ಗೌರವ ಅಧ್ಯಕ್ಷರಾದ ಎಚ್ ರಾಮುಲು (೯೯೦೧೧೭೫೩೩೮) ಹಾಗೂ ತಾಲೂಕ ಗಂಗಾಮತಸ್ಥ ಸಮಾಜದ ನೌಕರ ಸಂಘದ ಅಧ್ಯಕ್ಷರಾದ ಮಂಜುನಾಥ ಕರಡಕಲ್ (೭೦೧೯೫೬೩೦೧೯) ಇವರಿಗೆ ಫೋನ್ ಮುಖಾಂತರ ೨೧-೧೧-೨೦೨೩ರ ಒಳಗಾಗಿ ಮಾಹಿತಿ ನೀಡುವ ಮೂಲಕ ಹೆಸರನ್ನು ನೋಂದಾಯಿಸಿ ೨೬-೧೧-೨೦೨೩ ರಂದು ಬಾಗಲಕೋಟೆಯಲ್ಲಿ ನಡೆಯುವ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ತಾಲೂಕಿನ ಸಮಸ್ಥ ಗಂಗಾಮತ ಸಮಾಜದ ಬಂಧುಗಳಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕ ಗಂಗಮತಸ್ಥ ಸಮಾಜದ ಅಧ್ಯಕ್ಷರಾದ ಅಮರೇಶ ಕಲ್ಲೂರ, ಗೌರವ ಅಧ್ಯಕ್ಷರಾದ ಹೆಚ್ ರಾಮುಲು, ಗಂಗಾಮತಸ್ಥ ಸಮಾಜದ ನೌಕರ ಸಂಘದ ಅಧ್ಯಕ್ಷರಾದ ಮಂಜುನಾಥ ಕರಡಕಲ್, ತಾಲೂಕ ಕಾರ್ಯದರ್ಶಿಯಾದ ಮಲ್ಲೇಶ ಗುರಗುಂಟಾ ಹಾಜರಿದ್ದರು.