ದಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಚುನಾವಣೆ: ಮೇಲುಗೈ ಸಾಧಿಸಿದ ಬ್ಯಾಂಕ್ ಪುಟ್ಟಸ್ವಾಮಿ ಬಳಗ

ಮೈಸೂರು, ನ.17: ಸಾಂಸ್ಕøತಿಕ ಅರಮನೆ ನಗರಿಯ ದಿ ಸಿಟಿ ಕೋ ಆಪರೇಟಿವ್ ಬ್ಯಾಂಕಿನ 2020-25 ನೇ ಸಾಲಿನ ಆಡಳಿತ ಮಂಡಳಿಯ ಚುನಾವಣೆ ಇದೇ 15 ರಂದು ನಡೆದಿದ್ದು, ಇದರಲ್ಲಿ ಬ್ಯಾಂಕ್ ಪುಟ್ಟಸ್ವಾಮಿ ಬಳಗವು ಮೇಲುಗೈ ಸಾಧಿಸಿದೆ.
ಒಟ್ಟು 13 ನಿರ್ದೇಶಕರುಗಳ ನಡೆದ ಚುನಾವಣೆಯಲ್ಲಿ ಪುಟ್ಟಸ್ವಾಮಿ ಬಣದಿಂದ ಸ್ಪರ್ಧಿಸಿದ್ದ 10 ಮಂದಿ ಅಭ್ಯರ್ಥಿಗಳಲ್ಲಿ 6 ಮಂದಿ ಜಯಗಳಿಸಿದ್ದಾರೆ. ಇವರ ಪ್ರತಿಸ್ಪರ್ಧಿಯಾಗಿ ಮಾಜಿ ನಗರ ಪಾಲಿಕೆ ಸದಸ್ಯ ಎನ್.ಧ್ರುವರಾಜ್ ನಾಯಕತ್ವದಲ್ಲಿ ಸ್ಪರ್ಧಿಸಿದ್ದ 7 ಅಭ್ಯರ್ಥಿಗಳಲ್ಲಿ 3 ಮಂದಿ ಗೆಲುವು ಸಾಧಿಸಿದ್ದಾರೆ.
ಬ್ಯಾಂಕಿಗೆ ಆಯ್ಕೆಗೊಂಡ ನೂತನ ನಿರ್ದೇಶಕರುಗಳ ಹೆಸರು ಮತ್ತು ಪಡೆದ ಮತಗಳು ಇಂತಿವೆ. ಸಾಮಾನ್ಯ ಕ್ಷೇತ್ರದಿಂದ ಎಸ್.ಬಿ. ಶಿವ (5655), ಎನ್.ಧ್ರುವರಾಜ್ (5522), ಎಂ.ಎನ್. ಸ್ವರೂಪ್ (4675), ವಿ. ಮಧು (4551), ಎಂ.ಪುಟ್ಟಸ್ವಾಮಿ (4075), ಪ್ರಸನ್ನ ಎನ್. ಲಕ್ಷಣ್ (3953), ದಿನೇಶ್ ಎಂ.ವೆಂಕಟಲಿಂಗಯ್ಯ (3813), ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಜಯಕುಮಾರ್ (3156), ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಎಸ್.ಪುಟ್ಟಸ್ವಾಮಿ (2265), ಹಿಂದುಳಿದ ಪ್ರ.ವರ್ಗ ‘ಎ’ ಯಿಂದ ಎಂ.ಕೆ. ಅಶೋಕ್ (2832) ಹಾಗೂ ಜೆ.ಪ್ರಕಾಶ್ (2584), ಮಹಿಳಾ ಮೀಸಲು ಕ್ಷೇತ್ರದಿಂದ ಹೇಮಾ (4632) ಹಾಗೂ ಪುಷ್ಪಲತಾ (3212) ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೆ.ಎಸ್. ಹರೀಶ್ ಕುಮಾರ್ ತಿಳಿಸಿದ್ದಾರೆ.
ಮೊನ್ನೆ ನಗರದ ದೊಡ್ಡಕೆರೆ ಮೈದಾನದಲ್ಲಿ ಬೆಳಿಗ್ಗೆ 8 ಗಂಟೆಗೆ ಆರಂಭಗೊಂಡ ಮತದಾನವು ಮಂದಗತಿಯಲ್ಲೇ ಸಾಗಿ, ಮಧ್ಯಾಹ್ನದ ನಂತರ ಬಿರುಸುಗೊಂಡು, ಸಂಜೆ 4 ಗಂಟೆಗೆ ಮುಕ್ತಾಯವಾಯಿತು. ಬ್ಯಾಂಕಿನಲ್ಲಿ ಒಟ್ಟು 21,278 ಮಂದಿ ಸದಸ್ಯರಿದ್ದು ಇವರಲ್ಲಿ 10,786 ಮಂದಿ ತಮ್ಮ ಹಕ್ಕನ್ನು ಚಲಾಯಿಸಿದರು. 13 ನಿರ್ದೇಶಕರುಗಳ ಸ್ಥಾನಗಳ ಪೈಕಿ 7 ಸಾಮಾನ್ಯ ವರ್ಗ, 2 ಹಿಂದುಳಿದ ವರ್ಗ ‘ಎ’, 2 ಮಹಿಳಾ ಮೀಸಲು ಹಾಗೂ ಪ.ಜಾತಿ ಮತ್ತು ಪ.ಪಂಗಡಕ್ಕೆ ತಲಾ 1 ಸ್ಥಾನ ಮೀಸಲಿಡಲಾಗಿತ್ತು ಎಂದು ಚುನಾವಣಾಧಿಕಾರಿ ಕೆ.ಎಸ್. ಹರೀಶ್‍ಕುಮಾರ್ ವಿವರ ನೀಡಿದರು.