ದಿ. ಸಾತಲಿಂಗಪ್ಪ ಮೇತ್ರೆಯವರ ಜಯಂತಿ ಪ್ರಯುಕ್ತ ರಕ್ತದಾನ ಶಿಬಿರ

ಅಫಜಲಪುರ:ನ.20: ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ದುಧನಿ ನಗರದ ಗಣ್ಯರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಾಜಿ ನಗರಾಧ್ಯಕ್ಷರಾಗಿದ್ದ ದಿ. ಸಾತಲಿಂಗಪ್ಪ ಎಸ್ ಮೇತ್ರೆಯವರ ಪ್ರಥಮ ಜಯಂತಿ ಕಾರ್ಯಕ್ರಮದ ಪ್ರಯುಕ್ತ ದುಧನಿ ನಗರದಲ್ಲಿ ದಿನಾಂಕ: 21-11-2020 ರಂದು ಬೆಳಿಗ್ಗೆ: 11:30 ಗಂಟೆಗೆ ಬೃಹತ ರಕ್ತದಾನ ಶಿಬಿರ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಾಗೃತಿ ಸೇವಾ ಸಮಿತಿ ತಿಳಿಸಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಬಡದಾಳ ತೇರಿನಮಠದ ಶ್ರೀ. ಚನ್ನಮಲ್ಲೇಶ್ವರ ಶಿವಯೋಗಿ ಶಿವಾಚಾರ್ಯರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ದುಧನಿ ಶ್ರೀಮಠದ ಪೂಜ್ಯರಾದ ಶ್ರೀ. ಶಾಂತಲಿಂಗೇಶ್ವರ ಮಹಾಸ್ವಾಮೀಜಿ ವಹಿಸಲಿದ್ದು, ಸಮಾರಂಭದಲ್ಲಿ ಮಾಜಿ ಗೃಹ ಸಚಿವ ಸಿದ್ದರಾಮ ಎಸ್ ಮೇತ್ರೆ, ಯುವ ನೇತಾರ ಶಂಕರ ಎಸ್ ಮೇತ್ರೆ, ಸಮಿತಿಯ ಅಧ್ಯಕ್ಷ ಪ್ರಥಮೇಶ ಶಂಕರ ಮೇತ್ರೆ ಸೇರಿದಂತೆ ಹಲವಾರು ಗಣ್ಯಮಾನ್ಯರು, ವಿವಿಧ ಶ್ರೀಮಠಗಳ ಮಠಾಧೀಶರು ಉಪಸ್ಥಿತರಿರುವರು.

ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಯುವಕರು ಆಗಮಿಸಿ, ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.