ದಿ.ಸವಾಯಿ ಗಂಧರ್ವರ ಪುಣ್ಯಸ್ಮರಣೆ: ಅಹೋರಾತ್ರಿ ಸಂಗೀತೋತ್ಸವ

ಕುಂದಗೋಳ, ಸೆ 21: ಸುಖ ಮತ್ತು ಸಂತೋಷ ನೀಡುವ ಏಕೈಕ ನಾದ ಸಂಗೀತವಾಗಿದ್ದು, ಅಂತಹ ಸಂಗೀತ ಸೇವೆ ಸಲ್ಲಿಸಲು ಇಲ್ಲಿ ಗಾನ ಗಂಧರ್ವರು ಆಗಮಿಸಿ ನಿಸ್ವಾರ್ಥ ಸೇವೆ ಸಲ್ಲಿಸಿತ್ತಿರುವದು ಶ್ಲಾಘನೀಯ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿ ಸಮೀತಿ ಸದಸ್ಯ ಎಮ್.ಅರ್. ಪಾಟೀಲ್ ಹೇಳಿದರು.
ಅವರು ಕುಂದಗೋಳ ಪಟ್ಟಣದ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ನಡೆದ ದಿ.ಸವಾಯಿ ಗಂಧರ್ವ ಅವರ 70ನೇ ಪುಣ್ಯತಿಥಿಯ ಅಂಗವಾಗಿ ನಡೆದ ಅಹೋರಾತ್ರಿ ಸಂಗೀತೊತ್ಸವ ಉದ್ಘಾಟಿಸಿ ಮಾತನಾಡಿದರು.
ಪಟ್ಟಣದ ಪ್ರವಾಸಿ ಮಂದಿರದ ಹತ್ತಿರ ಹಾಗೂ ದ್ಯಾವನೂರ ಕ್ರಾಸ್ ಹತ್ತಿರ “ಗಾನ ಗಂಧರ್ವರ ನಾಡು” ಎಂಬ ನಾಮ ಫಲಕವನ್ನು ಅಳವಡಿಸುವ ಭರವಸೆಯನ್ನು ನೀಡಿದರು.
ಪ್ರಶಸ್ತಿ ಪ್ರದಾನ ಮಾಡಿದ ಕೃಷಿ ಉತ್ಪನ್ನ ರಪ್ತು ನಿಗಮಾಧ್ಯಕ್ಷ ಎಸ್.ಐ. ಚಿಕ್ಕನಗೌಡ್ರ ಮಾತನಾಡಿ ಅಧಿಕಾರ ಶಾಶ್ವತವಲ್ಲ. ಈ ಭವನ ನಿರ್ಮಾಣವಾಗಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಶ್ರಮ ಸಾಕಷ್ಟು ಇದ್ದು, ಮುಂದಿನ ಬಾರಿ ಈ ಸಂಗೀತೋತ್ಸವ ಕಾರ್ಯವನ್ನು ಅದ್ದೂರಿಯಾಗಿ ನಡೆಸುವದಾಗಿ ಹೇಳಿದರು.
ಸಂಗೀತ ಕಲಾವಿದರಿಗೆ ಸನ್ಮಾನಿಸಿ ಗೌರವಿಸಿದ ಮಾಜಿ ಶಾಸಕ ಎಂ.ಎಸ್. ಅಕ್ಕಿ ಮಾತನಾಡಿ ಸಂಗೀತ ಎಂಬುದು ದೇವರ ಕೊಡುಗೆ. ದೇಶದ ನಾನಾಭಾಗಗಳಿಂದ ಸಂಗೀತ ಕಲಾವಿದರು ಸವಾಯಿ ಗಂಧರ್ವ ಅವರ ಸೇವೆ ಮಾಡಲು ಬಂದು ಸಂಗೀತ ಕಾರ್ಯಕ್ರಮ ನಡೆಸಿಕೊಡುವ ಏಕೈಕ ಪಟ್ಟಣ ಕುಂದಗೋಳ ಎಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ವಿಶ್ವಸ್ಥ ಸಂಸ್ಥೆಯ ಅಧ್ಯಕ್ಷರಾದ ಅರವಿಂದ್ ಕಟಗಿ ಅವರು ಮಾತನಾಡಿ ಸಂಗೀತ ಕಾಶಿ ಎಂದು ಪ್ರಸಿದ್ಧಿ ಪಡೆದ ಕುಂದಗೋಳದಲ್ಲಿ ಈ ಸಂಗೀತೋತ್ಸವ 1953 ರಿಂದ ಪ್ರಾರಂಭವಾಯಿತು. ಇದನ್ನು 20 ವರ್ಷ ದ ನಂತರ ಸವಾಯಿ ಗಂಧರ್ವರ ವಿಶ್ವಸ್ಥ ಸಂಸ್ಥೆಯನ್ನು ಸ್ಥಾಪಿಸಿ ನಿರತಂರವಾಗಿ 70 ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದ್ದೆ. ಈ ಸ್ಮಾರಕ ಭವನವು ಶೀಥಿಲಾವಸ್ಥೆಯಲ್ಲಿದ್ದು ಆಗಾಗ ದುರಸ್ತಿ ಆಗುತ್ತಿದೆ. ಆದ್ದರಿಂದ ಈ ಭವನದ ಆಡಳಿತವನ್ನು ವಿಶ್ವಸ್ಥ ಸಂಸ್ಥೆಗೆ ಒಪ್ಪಿಸಿದರೆ ಅದನ್ನು ಮುಂದೆ ಸುವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುವದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಂ. ಸೋಮನಾಥ ಮರಡೂರ ಅವರಿಗೆ ಸವಾಯಿ ಗಂಧರ್ವರ ರಾಷ್ಟ್ರೀಯ ಸಂಗೀತ ಪುರಸ್ಕಾರ ಪ್ರಧಾನ ಮಾಡಲಾಯಿತು. ಪಂ. ಉಪೇಂದ್ರ ಭಟ್, ಡಾ. ಸುಧಾಂಷು ಕುಲಕರ್ಣಿ, ಪಂ. ಶ್ರೀಪಾದ ಹೆಗಡೆ, ವಿದೂಷಿ ಪದ್ಮಿನಿ ರಾವ್, ಪಂ. ಡಿ. ಕುಮಾರ್‍ದಾಸ್, ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.