ದಿ.ವೆಂಕಟೇಶ ಪೂಜಾರಿ ಸ್ಮರಣಾರ್ಥ ನ.೨ ಕ್ಕೆ ಭಾರ ಎತ್ತುವ ಸ್ಪರ್ಧೆ

ಅರಕೇರಾ.ಅ.೨೦- ಜಿ.ಪಂ. ಮಾಜಿ ಸದಸ್ಯ ದಿ.ವೆಂಕಟೇಶ ಪೂಜಾರಿ ಅವರ ತೃತೀಯಾ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನ.೨ ರಂದು ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯಗಳ ಜತೆಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಕಲ್ಪವೃಕ್ಷ ಪತ್ತಿನ ಸಹಕಾರಿ ನಿಯಮಿತ ಅಧ್ಯಕ್ಷ ಬಸವರಾಜ ಪೂಜಾರಿ ಎಂದರು.
ಇತ್ತೀಚೆಗೆ ಆಯೊಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿ, ಅಂದು ಬೆ.೯ ಕ್ಕೆ ದಿ.ವೆಂಕಟೇಶ ಪೂಜಾರಿಯವರ ಭಾವಚಿತ್ರ ಮೆರವಣಿಗೆ, ೧೧ ಕ್ಕೆ ಗದ್ದುಗೆಗೆ ವಿಶೇಷ ಪೂಜೆ. ಹೆಣ್ಣು ಮಕ್ಕಳಿಗೆ ಸೀರೆ ವಿತರಣೆ ಸೇರಿದಂತೆ ಅನ್ನ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗುವುದೆಂದು ತಿಳೀಸಲಾಗಿದೆ.
ಎತ್ತುಗಳಿಂದ ಕಲ್ಲು ಭಾರ ಎಳೆಯುವ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ಅರ್ಧ ತೊಲ ಬಂಗಾರ, ದ್ವಿತೀಯ ೨೦ ಸಾವಿರ, ತೃತೀಯಾ ೧೫ ಸಾವಿರ, ನಾಲ್ಕನೇ ೧೦ ಸಾವಿರ, ಐದನೇ ಬಹುಮಾನವಾಗಿ ೫ ಸಾವಿರ ರೂ. ನಗದು ನೀಡಲಾಗುವುದು. ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ವಿಜೇತರಿಗೆ ಅರ್ಧ ತೊಲ ಬಂಗಾರ, ದ್ವಿತೀಯ ೧೫ ಸಾವಿರ, ತೃತೀಯಾ ೧೦ ಸಾವಿರ, ನಾಲ್ಕನೇ ೫ ಸಾವಿರ, ಐದನೇ ಬಹುಮಾನವಾಗಿ ೩ ಸಾವಿರ ರೂ. ನಗದು ನೀಡಲಾಗುವುದು ಎಂದರು.
ಪ್ರಮುಖರಾದ ಮಹಾಂತೇಶ ಪೂಜಾರಿ, ಶೇಖರಪ್ಪ ಗೌಡ ಮಾ.ಪಾ, ಬಸವರಾಜ ಪೂಜಾರಿ, ಸಿದ್ದಯ್ಯ ಸ್ವಾಮಿ, ಸೂಗೂರೇಶ ತಾಳಿಕೋಟಿ, ವೆಂಕಟೇಶ ನಾಯಕ, ಹನುಮಂತ್ರಾಯ ನಾಯಕ, ಶ್ರೀಕಾಂತ ನಾಯಕ ಜಲ್ಲೆ, ಮಂಜುನಾಥ ಪೂಜಾರಿ, ರಾಜು ಟೈಲರ್, ಬಾಲಗೌಡ ಸಾತಲ್ ಇತರರಿದ್ದರು.