ದಿ.ವಿಜಯರೆಡ್ಡಿ ಪ್ರಥಮ ಪುಣ್ಯ ದಿನ ಅಂಗವಾಗಿ ಜು.೨೪ ರಕ್ತದಾನ ಶಿಬಿರ – ಶರಣರೆಡ್ಡಿ

ರಾಯಚೂರು,ಜು.೨೨- ಸಿಟಿ ಇಲೆವೆನ್ ಕ್ರಿಕೆಟ್ ಕ್ಲಬ್,ಎಸ್.ಸಿ.ಎ.ಬಿ ಕಾನೂನು ಮಹಾ ವಿದ್ಯಾಲಯ ಇವರ ಸಹಯೋಗದಲ್ಲಿ ದಿ.ವಿಜಯರೆಡ್ಡಿ ಪ್ರಥಮ ವಾರ್ಷಿಕ ಪುಣ್ಯ ದಿನದ ಅಂಗವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಟಿ ಇಲೆವೆನ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಶರಣರೆಡ್ಡಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಜುಲೈ ೨೪ ರಂದು ನಗರದ ಎಸ್.ಸಿ.ಎ.ಬಿ ಕಾನೂನು ಮಹಾ ವಿದ್ಯಾಲಯ ಆವರಣದಲ್ಲಿ ಬೆಳಿಗ್ಗೆ ೯:೩೦ ಆಯೋಜಿಸಲಾಗಿದೆ.
ಕಾರ್ಯಕ್ರಮ ಉದ್ಘಾಟನೆಯನ್ನು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮಾಡಲಿದ್ದಾರೆ ಮುಖ್ಯ ಅತಿಥಿಗಳಾಗಿ ತಾರಾನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಾರಸಮಲ್ ಸುಖಾನಿ,ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಶಂಕ್ರಪ್ಪ,ಮಾಜಿ ಆರ್.ಡಿ.ಎ ಅಧ್ಯಕ್ಷ ಕಡಗೋಲು ಆಂಜಿನೇಯ,ತಾರಾನಾಥ ಶಿಕ್ಷಣ ಸಂಸ್ಥೆ ಪ್ರದಾನ ಕಾರ್ಯದರ್ಶಿ ಮಂದಾಪೂರ್ ಶ್ರೀನಿವಾಸ್,ಕೆ.ಎಸ್.ಸಿ.ಎ ವಲಯ ಸಂಚಾಲಕ ಸುಧೀಂದ್ರ ಶಿಂಧೆ ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವೆಂಕಟರೆಡ್ಡಿ,ಸಂಜೀವ್,ರವಿರಾಜ್,ವಿಜಯಕುಮಾರ ಇದ್ದರು.