ದಿ. ವಾಜಪೇಯಿ ಜನ್ಮ ದಿನಾಚರಣೆ


ಲಕ್ಷ್ಮೇಶ್ವರ,ಡಿ.26- ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಮಾಜಿ ಪ್ರಧಾನಿ ಅಜಾತಶತ್ರು ಭಾರತ ರತ್ನ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 96ನೇಯ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಅಟಲ್ ಜೀ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಬಳಿಕ ಮಾತನಾಡಿದ ಶಾಸಕರ ಪುತ್ರ ಮಹೇಶ್ ಲಮಾಣಿ ಅವರು ದೇಶ ಕಂಡ ಅಪ್ರತಿಮ ನಾಯಕ ವಾಜಪೇಯಿ ಅವರು ಪ್ರಧಾನ ಮಂತ್ರಿಯಾಗಿದ್ದಾಗ ದೇಶದ ಪ್ರಗತಿ ಮತ್ತು ಚಅಭಿವೃದ್ಧಿಯನ್ನು ಕಂಡು ವಿದೇಶಿಗರು ಬೆಕ್ಕೆಸ ಬೆರೆಗಾಗಿದ್ದರು ಹಳ್ಳಿಹಳ್ಳಿಗಳಲ್ಲೂ ಬಿಜೆಪಿ ನೆಲೆಯೂರಲು ವಾಜಪೇಯಿ ಅವರು ಕಾರಣ ಎಂದರು.
ದೇಶದಲ್ಲಿ ಚತುಷ್ಪಥ ರಸ್ತೆ ಮತ್ತು ನದಿ ಜೋಡಣೆ ವಾಜಪೇಯಿ ಅವರ ಕನಸಾಗಿತ್ತು, ಅದರಲ್ಲಿ ಚತುಷ್ಪಥ ರಸ್ತೆಯ ಕನಸು ನನಸಾಗಿದ್ದು ನದಿ ಜೋಡಣೆ ಬಾಕಿ ಇದ್ದು ಅದನ್ನು ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರು ಈಡೇರಿಸುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು.
ಈ ಸಂದರ್ಭದಲ್ಲಿ ಶಿರಹಟ್ಟಿ ಮಂಡಳ ಅಧ್ಯಕ್ಷ ಫಕೀರೇಶ ರಟ್ಟಿಹಳ್ಳಿ, ಪ್ರಧಾನ ಕಾರ್ಯದರ್ಶಿ ಗಂಗಾಧರ ಮೆಣಸಿನಕಾಯಿ, ಜಿಲ್ಲಾ ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ಪಿ.ಬಿ. ಕರಾಟೆ, ಯುವ ಮೋರ್ಚಾ ಅಧ್ಯಕ್ಷ ನವೀನ್ ಹಿರೇಮಠ, ಸೋಮು ಉಪನಾಳ ಸೇರಿದಂತೆ ಅನೇಕರು ವಾಜಪೇಯಿ ಅವರ ಗುಣಗಾನ ಮಾಡಿದರು.
ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷ ಪರುಶುರಾಮ ಇಮ್ಮಡಿ, ಚಂಬಣ್ಣ ಬಾಳಿಕಾಯಿ, ವಿಜಯ್ ಕುಮಾರ್ ಹತ್ತಕಾಳ, ಲಕ್ಷ್ಮಣ ಲಮಾಣಿ, ಪ್ರವೀಣ್ ಬೊಮಲೆ, ಸಂತೋಷ ಜಾವೂರ, ಆಶಾ ಪಾಟೀಲ್, ಗಿರೀಶ್ ಚೌರಡ್ಡಿ, ಚಂದ್ರು ಹಂಪಣ್ಣವರ, ರುದ್ರಪ್ಪ ಉಮಚಗಿ, ಸಿದ್ದಣ್ಣ ದುರ್ಗಣವರ, ರಾಮಣ್ಣ ರಿತ್ತಿ, ಅಶೋಕ್ ನಿರಾಲೋಟಿ, ನಂದಾ ಧರ್ಮಾಯತ, ಚಂದ್ರು ದೊಡ್ಡಮನಿ, ಮಂಜುನಾಥ ನರೆಗಲ್, ಸಂಗಮೇಶ್ ಬೆಳವಲಕೊಪ್ಪ, ಶ್ರೀಕಾಂತ್ ಪೂಜಾರ್, ರಾಮು ನಾಯಕ, ರಘು ಪೂಜಾರ್, ಪ್ರಮೋದ್ ಕರಾಟೆ, ಮಹೇಶ್ ಗೌಡನಾಯ್ಕರ, ಚಿದಾನಂದ ಮಲ್ಲೂರು, ವಿಶಾಲ ಬೆಟಗುರಕಿ, ಈರಣ್ಣ ಗಾಣೆಗೇರ ಮತ್ತಿತರರು ಇದ್ದರು.
ನಗರ ಘಟಕದ ಅಧ್ಯಕ್ಷ ದುಂಡೇಶ ಕೊಟಗಿ, ಅನಿಲ್ ಮುಳಗುಂದ, ನಾಗೇಶ್ ಅಮರಾಪುರ ನಿರ್ವಹಿಸಿದರು.