ದಿ. ರಾಜ್‌ಗೆ 92ನೇ ಜನ್ಮದಿನ

ಬೆಂಗಳೂರು,ಏ.೨೪- ಕನ್ನಡ ಚಿತ್ರರಂಗ ಕಂಡ ಅಪರೂಪದ ವ್ಯಕ್ವಿತ್ವ ಹೊಂದಿದ್ದ ವರನಟ ದಿವಂಗತ ಡಾ. ರಾಜ್ ಕುಮಾರ್ ಅವರಿಗೆ ಇಂದು ೯೨ನೇ ಹುಟ್ಟುಹಬ್ಬ…
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಡಾ. ರಾಜ್ ಕುಮಾರ್ ಅಭಿಮಾನಿಗಳನ್ನು ಅಗಲಿ ೧೫ ವರ್ಷ ಕಳೆದಿದ್ದರೂ ಅವರ ನೆನಪು ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
ಕೊರೊನಾ ಸೋಂಕು ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಾರಾಂತ್ಯದ ಕಪ್ರ್ಯೂ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ತಾವು ಇರುವ ಕಡೆ ವರ ನಟ ರಾಜ ಕುಮಾರ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಸಮಯಲ್ಲಿ ಅಭಿಮಾನಿಗಳು, ರಾಜಕೀಯ ನೇತಾರರು, ನಟರು ಸೇರಿದಂತೆ ಚಿತ್ರರಂಗದ ಗಣ್ಯರು ಸ್ಮರಣೆ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವರನಟನಿಗೆ ಶುಭಾಯಷಗಳ ಮಹಾಪೂರವನ್ನೇ ಹರಿಸಿದ್ದಾರೆ.