ದಿ. ರಾಜೀವ ಗಾಂಧಿ ಪುಣ್ಯಸ್ಮರಣೆ

ಹುಬ್ಬಳ್ಳಿ, ಮೇ 22: ನಾಗರಾಜ ಗೌರಿ ಗೆಳೆಯರ ಬಳಗದ ವತಿಯಿಂದ ಮಾಜಿ ಪ್ರಧಾನಿ, ರಾಜೀವ ಗಾಂಧಿ ರವರ ಪುಣ್ಯಸ್ಮರಣೆ ಅಂಗವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಪೆÇೀಷಕರು ಲಾಕ್ ಡೌನ್ ನಿಂದ ಆಹಾರಕ್ಕಾಗಿ ಪರದಾಡುತ್ತಿರುವುದನ್ನು ಮನಗೊಂಡು ಪ್ರತಿದಿನ ಧಾರವಾಡದ ಸಿವಿಲ್ ಆಸ್ಪತ್ರೆಯಲ್ಲಿ ಆಹಾರ ಹಾಗೂ ನೀರಿನ ಬಾಟಲ ಗಳನ್ನು ಉಚಿತವಾಗಿ ಕೊಡುವುದರ ಮೂಲಕ ಮಾಜಿ ಪ್ರಧಾನಿ ದಿವಂಗತ ರಾಜೀವ ಗಾಂಧಿ ರವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಈ ಕಾರ್ಯಕ್ರಮಕ್ಕೆ ಕೆಪಿಸಿಸಿ ಕಾರ್ಯದರ್ಶಿ ನಾಗರಾಜ ಗೌರಿ ಚಾಲನೆ ನೀಡಿದರು. ಮಹಿಳಾ ಕಾಂಗ್ರೆಸ್ ಜಿಲ್ಲಾ ಅದ್ಯಕ್ಷೆ ದೀಪಾ ಗೌರಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಷಣ್ಮುಖ ಬೆಟಗೇರಿ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಆತ್ಮನಂದ ತಳವಾರ ನವನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಸ ರಮೇಶ್ ಅಸುಂಡಿ ಮಹಿಳಾ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರುಗಳಾದ ಸುಜನ್ ಕಾಕೆ ಲಕ್ಶ್ಮೀ ಗುತ್ತೆ ಚತನಾ ಲಿಂಗದಾಳ ಬಾಳಮ್ಮ ಜಂಗಿನವರ ಜ್ಯೋತಿ ವಾಲಿಕಾರ ಅಕ್ಕಮ್ಮ ಕಂಬಳಿ ಜೇಮ್ಸ್ ರೋಹಿತ ಕಲಾಲ ಬಸವರಾಜ ಮನಗುಂಡಿ ಪ್ರಕಾಶ ಬಾನಿ ಯಲ್ಲಪ್ಪ ಸದಾಬಾಣಾವರ ಈರಪ್ಪ ಕಾಡಪ್ಪನವರ ಯಲ್ಲಪ್ಪ ಉಳ್ಳಾಗಡ್ಡಿ ಇನ್ನಿತರರು ಉಪಸ್ಥಿತರಿದ್ದರು.