ದಿ.ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಹೆಸರಿನ ಮೇಲೆ ಸಾಮಾಜಿಕ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ- ಕಿಲ್ಲೇ ಶ್ರೀ

ರಾಯಚೂರು,ಜು.೨೭- ದಿ.ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜಿ ಅಬ್ದುಲ್ ಕಲಾಂ ಅವರ ಹೆಸರಿನ ಮೇಲೆ ಡಾ.ಎಪಿಜೆ ಅಬ್ದುಲ್ ಕಲಾಂ ಸಮಾಜ ಸೇವಾ ಸಂಸ್ಥೆಯನ್ನು ಹುಟ್ಟಿ ಹಾಕಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.
ಅವರಿಂದು ನಗರದ ರಂಗಮಂದಿರದಲ್ಲಿ ಡಾ.ಎಪಿಜೆ ಅಬ್ದುಲ್ ಕಲಾಂ ಸಮಾಜ ಸೇವಾ ಸಂಸ್ಥೆ ವತಿಯಿಂದ ಡಾ.ಎಪಿಜೆ ಅಬ್ದುಲ್ ಕಲಾಂ ಸಮಾಜ ಸೇವಾ ಸಂಸ್ಥೆಯ ೧೧ ನೇ ವಾರ್ಷಿಕೋತ್ಸವ ಹಾಗು ೬ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು,ಮಾನವೀಯ ಮೌಲ್ಯ ಅಳವಡಿಸಿಕೊಂಡಿದ್ದ ಡಾ ಅಬ್ದುಲ್ ಕಲಾಂ ಅವರ ಸರಳ ಸಜ್ಜನಿಕೆ ಗುಣಗಳು ಈ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಕಳೆದ ೬ ವರ್ಷದಿಂದ ಅಬ್ದುಲ್ ಕಲಾಂ ಅವರ ಹೆಸರಿನ ಮೇಲೆ ಪ್ರತಿ ವರ್ಷ ೫೦ ಪ್ರಶಸ್ತಿಗಳನ್ನು ನೀಡುತ್ತಿದ್ದಾರೆ.ಅಬ್ದುಲ್ ಕಲಾಂ ಅವರು ಜಾತಿ,ಮತ ಎಲ್ಲವನ್ನೂ ಮೀರಿ ರಾಷ್ಟ್ರಕ್ಕೆ ತತ್ವಗಳನ್ನು ನೀಡಿದ್ದಾರೆ.ರಾಷ್ಟ್ರಪತಿ ಭವನಕ್ಕೆ ಹೋಗುವ ಮುಂಚೆ ಕೇವಲ ೧ ಸುಟ್ಕೆಸ್ ಪುಸ್ತಕಗಳನ್ನು ತೆಗೆದುಕೊಂಡು ಹೋಗಿದ್ದರು.ಮತ್ತೆ ಆಡಳಿತ ಅವಧಿ ಮುಗಿದು ಇಂತಿರುವಾಗ ಮತ್ತೆ ಮತ್ತೆ ಅದೇ ಒಂದು ಸುಟ್ಕೆಸ್ ತೆಗೆದುಕೊಂಡು ಬಂದಿರುವ ವ್ಯಕ್ತಿ ಯಾರಾದರೂ ಇದ್ದರೆ ಅದು ಡಾ.ಎಪಿಜೆ ಅಬ್ದುಲ್ ಕಲಾಂ ಅವರು ಮಾತ್ರ ಇಂತ ವ್ಯಕ್ತಿ ಸಿಗೋದು ಬಹಳ ಕಷ್ಟ ಎಂದರು.
ಇದೇ ವೇಳೆ ೧೩ ಜನರಿಗೆ ೨೦೨೨ ನೇ ಸಾಲಿನ ಕಲಾಂ ಪ್ರಶಸ್ತಿ ಪ್ರದಾನ ಮಾಡಲಾಯಿತು. ೨ ಉತ್ತಮ ಪರಿಸರ ಶಾಲೆಗಳನ್ನು ಗುರುತಿಸಿದರು.
ಈ ಸಂದರ್ಭದಲ್ಲಿ ಈಶ್ವರಿಯ ವಿಶ್ವವಿದ್ಯಾಲಯ ರಾಜಯೋಗಿನಿ ಬಿಕೆ.ಸ್ಮೀತಾ ಅಕ್ಕ, ಜೆಡಿಎಸ್ ಮುಖಂಡ ರಾಮನಗೌಡ ಏಗನೂರು, ಸಾಯಿಕಿರಣ್ ಆದೋನಿ, ಸಂಸ್ಥೆ ಅಧ್ಯಕ್ಷ ವಿಶ್ವನಾಥ ರೆಡ್ಡಿ ,ರಾಜಶೇಖರ್ ಸಾಹುಕಾರ, ಯಾಪಲದಿನ್ನಿ ಗ್ರಾಮ ಪಂಚಾಯತ್ ಅಧ್ಯಕ್ಷ ಉಷಾ ಉಮೇಶ್ ಇದ್ದರು.