ದಿ.ಪುಷ್ಪಾ ಹರಿರಾಮ್ ಪಂಜಾಬಿ ಎನ್‍ಎಸ್‍ಎಸ್ ನೇತೃತ್ವ ಪ್ರಶಸ್ತಿ’

ವಿಜಯಪುರ, ಸೆ.25- ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ.ನಾಮದೇವ. ಎಮ್.ಗೌಡ ಅವರಿಗೆ ಕೃಷ್ಣ ಫೌಂಡೇಶನ್ ವತಿಯಿಂದ ನೀಡುವ ‘ದಿ.ಪುಷ್ಪಾ ಹರಿರಾಮ್ ಪಂಜಾಬಿ ಎನ್‍ಎಸ್‍ಎಸ್ ನೇತೃತ್ವ ಪ್ರಶಸ್ತಿ’ ಲಭಿಸಿದೆ.
ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಎನ್‍ಎಸ್‍ಎಸ್ ಕೋಶವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವ ನಿರ್ದೇಕರಿಗೆ ನೀಡುವ ಈ ಪ್ರಶಸ್ತಿಯನ್ನು ಈ ಬಾರಿ ಎನ್‍ಎಸ್‍ಎಸ್ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಘೋಷಿಸಲಾಗಿದೆ. ಇಂದು ಮಧ್ಯಾಹ್ನ ನಡೆದ ಆನ್‍ಲೈನ್ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ವಿತರಿಸಲಾಯಿತು.
ಪ್ರಶಸ್ತಿಯನ್ನು ಪಡೆದಿರುವ ಪ್ರೊ.ನಾಮದೇವ್‍ಗೌಡಅವರನ್ನುಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವೆಪ್ರೊ.ಆರ್.ಸುನಂದಮ್ಮ, ಮೌಲ್ಯಮಾಪನ ಕುಲಸಚಿವ ಪ್ರೊ.ರಮೇಶ್.ಕೆ. ಅಭಿನಂದಿಸಿದ್ದಾರೆ.