ದಿ.ಪುನೀತ್ ರಾಜ್ ಕುಮಾರ್ ನೆನಪಿನಲ್ಲಿ ರಕ್ತದಾನ

ಬೆಂಗಳೂರು.ನ೧೦:ಪುನೀತ್ ರಾಜ್‌ಕುಮಾರ್ ಅವರ ನೆನಪಿನಲ್ಲಿ ಲಯನ್ಸ್ ಕ್ಲಬ್ ಶೇಷಾದ್ರಿಪುರಂ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಿದ್ದರು.
ರಕ್ತದಾನ ಶಿಬಿರವನ್ನು ಅಕಾರ್ ಮ್ಯಾಕ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ||ಸ್ನೇಹರಾಕೇಶ್ ರವರು ದೀಪಾ ಬೆಳಗಿಸಿ ಉದ್ಘಾಟನೆ ಮಾಡಿದರು ನಂತರ
ಅಕಾರ್ ಮ್ಯಾಕ್ಸ್ ಸಂಸ್ಥೆಯ ಸುಮಾರು ೧೦೦ಜನ ಸಿಬ್ಬಂದಿಯಿಂದ ರಕ್ತ ದಾನ ಮಾಡಿದರು.
ಇದೇ ಸಂದರ್ಭದಲ್ಲಿ ಡಾ.ಸ್ನೇಹರಾಕೇಶ್ ರವರು ಮಾತನಾಡಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಚಲನಚಿತ್ರರಂಗ ಮತ್ತು ಸಮಾಜ ಸೇವೆಯಲ್ಲಿ ಉತ್ತಮ ಸಾಧನೆ ಮಾಡಿ ಯುವ ರತ್ನರಾಗಿದ್ದಾರೆ.ಸಾವಿನಲ್ಲು ಸಾರ್ಥಕತೆ ಮೆರದು ತಮ್ಮ ನೇತ್ರದಾನ ಮಾಡಿ ನಾಲ್ಕು ಜನರಿಗೆ ದೃಷ್ಟಿ ನೀಡಿದ್ದಾರೆ .
ವೃದ್ದಾಶ್ರಮ,ಗೋಶಾಲೆ ಮತ್ತು ಉಚಿತ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಹಿಂದುಳಿದ ಕಡುಬಡವರ ಪರ ಧ್ವನಿಯಾಗಿ ನಿಂತಿದ್ದಾರೆ .ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಆದರ್ಶ ಗುಣಗಳು ನಮ್ಮ ಸಮಾಜಕ್ಕೆ ಮಾರ್ಗದರ್ಶನವಾಗಿದೆ ಅದ್ದರಿಂದ ಇಂದು ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಹೇಳಿದರು.ಶೇಷಾದ್ರಿಪುರಂ ಲಯನ್ಸ್ ಕ್ಲಬ್ ಸದಸ್ಯರು ಪಾಲ್ಗೊಂಡಿದ್ದರು.