ದಿ.ಪಿ.ಹರೀಶ ಸ್ಮರಣಾರ್ಥ ತಾಲೂಕ ಮಟ್ಟದ ಕ್ರಿಕೆಟ್ ಟೂರ್ನಾಮೆಂಟ್

ಮಾನ್ವಿ, ಃ ಯುವ ಸಮುದಾಯವನ್ನು ಕ್ರೀಡೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಲು ಹಾಗೂ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಗುರುತಿಸಿಕೊಳ್ಳುವಂತಾಗಲು ಜೊತೆಗೆ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಾನ್ವಿಯಲ್ಲಿ ೫.ಕೋಟಿ ವೆಚ್ಚದಲ್ಲಿ ಕ್ರೀಡಾಪಟುಗಳಿಗೆ ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ರಾಜಾವೆಂಕಟಪ್ಪನಾಯಕ ಹೇಳಿದರು.
ಮಾನ್ವಿ ಪಟ್ಟಣದ ದುರ್ಗಾಪ್ರಸಾದ ಬಾಂಬೆ ಮೈದಾನದಲ್ಲಿ ಆಶಾಕಿರಣ ಯುವಕ ಸಂಘದ ವತಿಯಿಂದ ದಿ.ಪಿ.ಹರೀಶ ಸ್ಮರಣಾರ್ಥವಾಗಿ ಹಾಗೂ ಕ್ರಿಸ್‌ಮಸ್ ಹಬ್ಬದಂಗವಾಗಿ ತಾಲೂಕ ಮಟ್ಟದ ಟೆನ್ನಿಸ್‌ಬಾಲ್ ಕ್ರಿಕೆಟ್ ಟೂರ್ನಾಮೆಂಟ್ ಪಂದ್ಯಾವಳಿಗೆ ಚಾಲನೆ ಹಾಗೂ ಕ್ರೀಡಾಪಟುಗಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಉತ್ಸಾಹಿ ಯುವಕನಾಗಿದ್ದ ದಿ.ಪಿ.ಹರೀಶ ಉತ್ತಮ ಕ್ರೀಡಾಪಟು ಕೂಡಾ ಆಗಿದ್ದರು ಯುವ ಕ್ರೀಡಾಪಟುಗಳಿಗೆ ಸದಾ ಪ್ರೋತ್ಸಾಹಿಸುತ್ತಿದ್ದನು. ಕ್ರೀಯಾಶೀಲ ಯುವಕ ಪಿ.ಹರೀಶ ಸ್ಮರಣಾರ್ಥ ಕ್ರಿಕೆಟ್ ಟೂರ್ನಾಮೆಂಟ್ ಏರ್ಪಡಿಸಿರುವುದು ತುಂಬಾ ಶ್ಲಾಘನೀಯವಾದುದು ಮಾನ್ವಿ, ಸಿರವಾರ ಭಾಗದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಹಿತದೃಷ್ಠಿಯಿಂದ ಆಟದ ಮೈದಾನ ನಿರ್ಮಾಣ ಮತ್ತು ಹಿರಿಯ ನಾಗರೀಕರಿಗಾಗಿ ವಾಯುವಿಹಾರ (ವಾಕಿಂಗ್) ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎಂದರು.
ಈ ಕ್ರಿಕೆಟ್ ಟೂರ್ನಾಮೆಂಟ್‌ನಲ್ಲಿ ಭಾಗವಹಿಸುವ ವಿವಿಧ ತಂಡಗಳ ಆಟಗಾರರು ನಿರ್ಣಾಯಕರು ಮತ್ತು ಆಯೋಜಕರು ತೆಗೆದುಕೊಳ್ಳುವ ನಿರ್ಣಯಗಳಿಗೆ ಬದ್ದರಾಗಿರಬೇಕು ಮತ್ತು ಸೋಲು ಗೆಲುವುಗಳನ್ನು ಸಮನಾಗಿ ಸ್ವೀಕರಿಸಿ ಕ್ರೀಡಾ ಸ್ಪೂರ್ತಿಯನ್ನು ಮೆರೆಯಬೇಕು. ಇಂದಿನ ಯುವ ಕ್ರಿಕೆಟಿಗರು ಸಾಧನೆಯ ಶಿಖರಮೂರ್ತಿಗಳಾದ ಸಚಿನ್ ತೆಂಡೂಲ್ಕರ್, ಮಹೇಂದ್ರಸಿಂಗ್ ಧೋನಿಯವರನ್ನು ಸ್ಪೂರ್ತಿಯನ್ನಾಗಿಸಿಕೊಂಡು ಕಷ್ಠಪಟ್ಟು ಕ್ರಿಕೆಟ್ ತರಬೇತು ಪಡೆದು ಭವಿಷ್ಯದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ತಂಡದಲ್ಲಿ ಗುರುತಿಸಿಕೊಳ್ಳಬೇಕೆಂದು ರಾಜಾವೆಂಕಟಪ್ಪನಾಯಕ ಸಲಹೆಯಿತ್ತರು.
ಒಂದು ತಿಂಗಳು ಪರ್ಯಂತ ನಡೆಯುವ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್‌ನ ಪ್ರಥಮ ಬಹುಮಾನ ಜೆಡಿಎಸ್ ರಾಜ್ಯ ಯುವ ಉಪಾಧ್ಯಕ್ಷ ರಾಜಾರಾಮಚಂದ್ರನಾಯಕ ೩೧ ಸಾವಿರ ಮತ್ತು ದ್ವೀತಿಯ ಬಹುಮಾನ ೧೫.೫೦೦ ರೂ.ಗಳನ್ನು ಪಿ.ರವಿಕುಮಾರ ವಕೀಲ ನೀಡಿರುವುದು ಸೇರಿದಂತೆ ಇನ್ನಿತರ ಕ್ರೀಡಾಪ್ರೇಮಿಗಳು ವಿವಿಧ ರೀತಿಯ ಬಹುಮಾನಗಳನ್ನು ನೀಡುವ ಮೂಲಕ ಕ್ರೀಡೆಗಳಿಗೆ ಪ್ರೋತ್ಸಾಹಿಸುತ್ತಿರುವುದು ಅಭಿನಂದನೀಯ ಎಂದರು.
ಈ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಫಾ.ಜ್ಞಾನಪ್ರಕಾಶಂ ಮಾತನಾಡಿದರು ಪಿ.ರವಿಕುಮಾರ ವಕೀಲ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ವೇಳೆ ಈ ವೇಳೆ ರಾಜ್ಯ ಜೆಡಿಎಸ್ ಯುವ ಉಪಾಧ್ಯಕ್ಷ ರಾಜಾರಾಮಚಂದ್ರನಾಯಕ, ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಬಲ್ಲಟಗಿ, ರಾಜಾಶ್ಯಾಂಸುಂದರನಾಯಕ ವಕೀಲ, ನಾಗರಾಜ ಭೋಗಾವತಿ, ಗೋಪಾಲನಾಯಕ ಹರವಿ, ಸಾಜಿದ್‌ಖಾದ್ರಿ, ಭಾಷಸಾಬ್, ಹನುಮಂತ ಭೋವಿ, ಪಿ.ರವಿಕುಮಾರ, ಸುಂದರ ಕಪಗಲ್, ಮೌಲಾಸಾಬ್, ಆಂಜನೇಯ್ಯ ಸರ್ವೋದಯ ಶಿಕ್ಷಣ ಸಂಸ್ಥೆ, ಪಿ.ಪ್ರವೀಣ್‌ಕುಮಾರ, ಅಳ್ಳಪ್ಪನಾಯಕ, ನಾಗರಾಜ ಭಂಡಾರಿ, ಸುದರ್ಶನ್ ವಕೀಲ, ಅಮರೇಶಗೌಡ ಖರಾಬದಿನ್ನಿ, ತಾಯಪ್ಪ ಬಿ.ಹೊಸೂರು, ಹನುಮಂತಪ್ಪ ಕೊಟ್ನೆಕಲ್, ನಾಗರಾಜ ತಡಕಲ್, ಸುಪ್ರಿಯಾಕುಮಾರ, ಪರಶುರಾಮ ಬಾಗಲವಾಡ, ದುರ್ಗಾಪ್ರಸಾದ್ ಬಾಂಬೆ, ಶಬ್ಬೀರ್ ಸೇರಿದಂತೆ ಅನೇಕ ಮುಖಂಡರು, ಆಶಾಕಿರಣ ಯುವಕ ಸಂಘದ ಪದಾಧಿಕಾರಿಗಳು, ಕ್ರೀಡಾಪಟುಗಳು ಇದ್ದರು.