
ಕೋಲಾರ,ಏ.೧೧:ಒಕ್ಕಲಿಗರ ಸಮುದಾಯದ ಪರವಾಗಿ ನಾನಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವ ಸಮಾಜದ ಶಕ್ತಿಯಾಗಿ, ವ್ಯಕ್ತಿಯಾಗಿ ಸಾಮಾಜಿಕ ಹೋರಾಟಗಳ ಮೂಲಕ ಸಮುದಾಯದ ಪರವಾಗಿ ಶ್ರಮಿಸಲು ಮುಂದಾಗಿದ್ದ್ ಮಹಾನ್ ಚೇತನ ಎಂದರೆ ತಪ್ಪಾಗಲಾರದು ಎಂದು ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ರೋಟರಿ ಹೆಚ್.ರಾಮಚಂದ್ರಪ್ಪ ಸಂತಾಪ ಸೂಚಿಸಿದರು.ಪಟ್ಟಣದ ಬಂಗಾರಪೇಟೆಯ ಎಸ್.ಎನ್.ಆರ್.ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಹಾಗೂ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಸಂಘದ ರಾಜ್ಯಾಧ್ಯಕ್ಷ ದಿ.ಬಾಣಸವಾಡಿ ನಾಗಣ್ಣ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ ದಿ.ನಾಗಣ್ಣ ಬಾಣ ಅವರ ಅಕಾಲಿಕ ನಿಧನದಿಂದ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರದ ಮೇಲೆ ಒತ್ತಡ ತಂದು ನಿಗಮಕ್ಕೆ ಐನೂರು ಕೋಟಿ ರೂಗಳ ಅನುದಾನವನ್ನು ಮೀಸಲಿಡಲು ಒತ್ತಡ ಹಾಕಿದ ಜೊತೆಯಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಲು ಧ್ವನಿ ಎತ್ತಿದ್ದರು ಎಂದು ನೆನಪಿಸಿದರು,
ಮಂಡ್ಯ ಜಿಲ್ಲೆಯಲ್ಲಿ ದಿವಂಗತ ಬಾಣಸವಾಡಿ ನಾಗಣ್ಣ ಅವರ ಹೆಸರಿನಲ್ಲಿ ನಿಧಿಯನ್ನು ಸ್ಥಾಪಿಸಲಾಗಿದ್ದು, ಮಾಜಿ ಸಚಿವ ಚಲುವರಾಯಸ್ವಾಮಿ ಅವರು ಮುಂಬರುವ ದಿನಗಳಲ್ಲಿ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಬಿ.ಬೈಚಪ್ಪ ಮಾತನಾಡಿ, ನಾಗಣ್ಣ ಅವರು ಮಾರ್ಗದರ್ಶನ ಇಂದಿನ ಯುವಶಕ್ತಿಗೆ ಬೇಕಾಗಿದೆ.ಎಂದರು.
ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಗೂಳಿಗಾನಹಳ್ಳಿ ನಾಗರಾಜ್, ವೀರವೆಂಕಟಪ್ಪ, ಜಿಲ್ಲಾ ನಿರ್ದೇಶಕ, ಪ್ರಭಾವಿ ಮುಖಂಡರಾದ ಕಾಮಧೇನಹಳ್ಳಿ ವೆಂಕಟಾಚಲಪತಿ, ಶ್ರೀರಾಮ್, ರಾಮಯ್ಯ ಇತರರು ಇದ್ದರು.