
ಚಾಮರಾಜನಗರ, ಮಾ. 13:- ಮೊನ್ನೆ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್. ಧ್ರುವನಾರಾಯಣ್ ಅವರ ಹೆಗ್ಗವಾಡಿ ನಿವಾಸಕ್ಕೆ ಇಂದು ಸಾಯಂಕಾಲ ಡಾ.ಬಿ.ಆರ್.ಅಂಬೇಡ್ಕರ್ ರವರ ಮೊಮ್ಮಗ ಭೀಮರಾವ್ ಯಶವಂತರಾವ್ ಅಂಬೇಡ್ಕರ್ ಭೇಟಿ ನೀಡಿ, ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.
ಪತ್ನಿ ವೀಣಾಧ್ರುವನಾರಾಯಣ್, ಮಕ್ಕಳಾದ ದರ್ಶನ್ ಹಾಗೂ ದೀರಾಜ್ ಅವರಿಗೆ ಧೈರ್ಯ ತುಂಬಿದ ಯಶವಂತರಾವ್ ಅವರು, ಧ್ರುವನಾರಾಯಣ್ ಬಹಳ ಸಜ್ಜನಿಕೆಯುಳ್ಳ ಅದರ್ಶ ರಾಜಕಾರಣಿಯಾಗಿದ್ದರು. ಕ್ರಿಯಾಶೀಲರಾಗಿ ಎಲ್ಲಾ ವರ್ಗದ ಜನರ ಜೊತೆಗೆ ಉತ್ತಮ ಒಡನಾಟವನ್ನು ಹೊಂದಿದ್ದರು. ಅವರ ಅಕಾಲಿಕ ನಿಧನ ಕುಟುಂಭಕ್ಕೆ ಅಷ್ಟೇ ಅಲ್ಲ ಸಮಾಜಕ್ಕು ತುಂಬಲಾರದ ನಷ್ಟವಾಗಿದೆ ಎಂದು ಕಂಬಿನಿ ಮಿಡಿದರು.
ಈ ಸಂದರ್ಭದಲ್ಲಿ ದಲಿತ ಹಿರಿಯ ಮುಖಂಡ ವೆಂಕಟರಮಣಸ್ವಾಮಿ (ಪಾಪು) ವಕೀಲರಾದ ಪುಟ್ಟಸ್ವಾಮಿ ರಾಮಸಮುದ್ರ, ಗಂಗಾಧರ್ ಇತರರು ಇದ್ದರು.