ದಿ.ದೇವರಾಜ ಅರಸು ಭಾವಚಿತ್ರಕ್ಕೆ ಪುಷ್ಪನಮನದ ಸ್ಮರಣೆ

ಹರಿಹರ. ಜು .7;  ನಗರದ ಮರಾಠಗಲ್ಲಿಯ ಬಡಾವಣೆಯಲ್ಲಿರುವ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ವೇದಿಕೆಯ ವತಿಯಿಂದ ಡಿ. ದೇವರಾಜ ಅರಸುರವರ 39ನೇ ಪುಣ್ಯಸ್ಮರಣೆ ಅಂಗವಾಗಿ ನುಡಿ ನಮನ ಸಲ್ಲಿಸಲಾಯಿತು.ದೀನ – ದಲಿತರ , ಹಿಂದುಳಿದ ವರ್ಗದವರ ಬದುಕಿನ ಆಶಾಕಿರಣ , ಸಾಮಾಜಿಕ ಪರಿವರ್ತನೆಯ ಹರಿಕಾರ , ಮಾಜಿ ಮುಖ್ಯಮಂತ್ರಿ ಡಿ . ದೇವರಾಜ ಅರಸ್ ಅವರ 39ನೇ ಪುಣ್ಯಸ್ಮರಣೆಯ ಪ್ರಯುಕ್ತ  ದೇವರಾಜ್ ಅರಸುರವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸುವುದರ ಮೂಲಕ , ಅವರ ಪ್ರಗತಿಪರ ಚಿಂತನೆ ಹಾಗೂ ಅವರು ಕೆಳಹಂತದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಆದರ್ಶಗಳನ್ನು ಕೊಂಡಾಡುವ ಮೂಲಕ , ಅವರಿಗೆ ಗೌರವದ ನಮನಗಳನ್ನು ಸಲ್ಲಿಸಲಾಯಿತು.        ಈ ಸಂದರ್ಭದಲ್ಲಿ ಹಿಂದುಳಿದ ವರ್ಗದ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷರಾದ ಜಿ. ಹೆಚ್  ಮರಿಯೋಜಿರಾವ್, ಪದಾಧಿಕಾರಿಗಳಾದ ಹೆಚ್. ಕೆ. ಕೊಟ್ರಪ್ಪ , ಚಂದ್ರಶೇಖರಪ್ಪ ಗುಂಡೇರಿ, ಕೆಂಚನಹಳ್ಳಿ ಮಾಂತೇಶಪ್ಪ, ಪ್ರಕಾಶ್ ಕೋಳೂರು, ಕೆ.ಬಿ. ರಾಜಶೇಖರ್ , ಪಿ.ಹನುಮಂತಪ್ಪ , ಹಾಗೂ , ಹರೀಶ್ ಸಾವಂತ್ , ಹೆಚ್ ಆಂಜನೇಯ , ಗಗನ್ ಮರಿಗೌಡ ಉಪಸ್ಥಿತರಿದ್ದರು.